ಕನ್ನಡದ ಬಿಗ್ಬಾಸ್ ಸೀಸನ್ 11, 11ನೇ ವಾರಕ್ಕೆ ಕಾಲಿಟ್ಟಿದೆ. ಈ ಬೆನ್ನಲ್ಲೇ 10ನೇ ವಾರಕ್ಕೆ ಅಚ್ಚರಿಯ ರೀತಿಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆದ್ದಿದ್ದಾರೆ . ಬಿಗ್ಬಾಸ್ ಮನೆಗೆ ಯಾವ ಸ್ಪರ್ಧಿ ಬಂದರು ರೂಲ್ಸ್ ಬ್ರೇಕ್ ಮಾಡುವಂತಿರಲಿಲ್ಲ, ಆದರೆ ಹಾಗೇನಾದರೂ ಸ್ಪರ್ಧಿಗಳು ರೂಲ್ಸ್ ಬ್ರೇಕ್ ಮಾಡಿದ್ದೇ ಆದ್ರೆ ಅವರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಬಿಗ್ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದವರಿಗೆ ಆ ವಾರದ ಕ್ಯಾಪ್ಟನ್ ಶಿಕ್ಷೆ ಕೊಡುತ್ತಾರೆ. ಆದರೆ ಇಲ್ಲಿ ಕ್ಯಾಪ್ಟನ್ ಅವರೇ ಬಿಗ್ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಈ ವಾರದ ಕ್ಯಾಪ್ಟನ್ ಆಗಿ ಗೌತಮಿ ಅವರು ಆಯ್ಕೆಯಾಗಿದ್ದರು. ಆದರೆ ಕ್ಯಾಪ್ಟನ್ ಗೌತಮಿ ಅವರು ಬಿಗ್ಬಾಸ್ ಮನೆಯ ಮುಖ್ಯ ರೂಲ್ಸ್ ಅನ್ನೇ ಬ್ರೇಕ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗೌತಮಿ ಜಾಧವ್ ಡ್ರೆಸ್ ಅಪ್ ಮಾಡುವಾಗ ಮೈಕ್ ಅನ್ನು ಹಾಕಿಕೊಂಡಿರಲಿಲ್ಲ. ಹಾಕಿಕೊಳ್ಳದೇ ʻಥ್ಯಾಂಕ್ಯೂʼ ಎಂಬ ಪದವನ್ನು ಯೂಸ್ ಮಾಡಿದ್ದಾರೆ. ಆ ಕೂಡಲೇ ಬಿಗ್ಬಾಸ್ ವಾಯ್ಸ್ ನೋಟ್ ಬರುತ್ತೆ. ಆ ಕೂಡಲೇ ಓಡಿ ಹೋಗಿ ಮೈಕ್ ಧರಿಸುತ್ತಾರೆ ಗೌತಮಿ. ಇದಾದ ಬಳಿಕ ಮನೆಯ ಎಲ್ಲ ಸದಸ್ಯ ಬಳಿ ಹೋಗಿ ನಾನು ಕ್ಯಾಪ್ಟನ್ ಆಗಿ ಈ ತಪ್ಪು ಮಾಡಬಾರದಾಗಿತ್ತು ಅಂತ ಹೇಳಿ ಕ್ಷಮೆ ಕೇಳಿದ್ದಾರೆ.