ಕಳೆದ ವಾರ ದೊಡ್ಮನೆಯಲ್ಲಿ ಮನೆಯಲ್ಲಿ ಹಲವು ಟ್ವಿಸ್ಟ್ಗಳು ನಡೆದಿವೆ. ಈ ವಾರದ ಪಂಚಾಯಿತಿಗೆ ಬಂದ ಸುದೀಪ್ ಸಹ ಕಳೆದ ವಾರ ಮನೆಯಲ್ಲಿ ಆದ ಘಟನೆಗಳನ್ನು ಧಾರಾವಾಹಿ ಎಪಿಸೋಡ್ಗಳನ್ನು ಸೀರಿಯಲ್ಗೆ ಹೋಲಿಕೆ ಮಾಡಿದರು. ವಾರಗಟ್ಟಲೆ ಕೂತು ಬರೆದರೂ ಈ ರೀತಿ ಟ್ವಿಸ್ಟ್ ಮತ್ತು ತಿರುವುಗಳಳು ತರಲಾಗುವುದಿಲ್ಲ ಅಂಥಹಾ ಅದ್ಭುತ ತಿರುವುಗಳು ಈ ವಾರ ಬಿಗ್ಬಾಸ್ ಮನೆಯಲ್ಲಿ ನಡೆದಿವೆ ಎಂದರು.
ಮೋಕ್ಷಿತಾಗೆ ಕ್ಯಾಪ್ಟನ್ ಆಗುವ ಅವಕಾಶ ಇತ್ತು, ಆದರೆ ಗೌತಮಿಯ ಸಹಾಯವನ್ನು ಅದಕ್ಕಾಗಿ ಅವರು ಪಡೆಯಬೇಕಿತ್ತು, ಆದರೆ ತಾವು ಗೌತಮಿಯ ಸಹಾಯ ಪಡೆಯುವುದಿಲ್ಲ ಎಂದು ನಿರಾಕರಿಸಿದರು. ಇದರಿಂದ ಅವಕಾಶ ಅವರ ಕೈತಪ್ಪಿ ಗೌತಮಿಗೆ ಹೋಯ್ತು, ಅದೃಷ್ಟದಿಂದ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಗೌತಮಿ ಆಟದಲ್ಲಿ ಗೆದ್ದು ಮನೆಯ ಕ್ಯಾಪ್ಟನ್ ಆಗಿಬಿಟ್ಟರು.
ಈ ಬಗ್ಗೆ ಸುದೀಪ್ ಜೊತೆ ಮಾತನಾಡಿದ ಗೌತಮಿ, ಕಳೆದ ವಾರ ಅವರು ಕ್ಯಾಪ್ಟನ್ ಆಗಬಾರದು ಎಂದು ನಾನೇ ತಡೆದು ಈಗ ಅವರ ಬಳಿ ಹೋಗಿ ಸಹಾಯ ಕೇಳುವುದಕ್ಕೆ ನನ್ನ ಆತ್ಮಸಾಕ್ಷಿ ಅಡ್ಡ ಬಂತು ಹಾಗಾಗಿ ನಾನು ಅವರನ್ನು ಕೇಳಲಿಲ್ಲ ಎಂದರು. ಅದಕ್ಕೆ ಉತ್ತರಿಸಿದ ಸುದೀಪ್, ನೀವು ನಿಮ್ಮ ಆತ್ಮಸಾಕ್ಷಿಗೆ ಗೌರವ ಕೊಟ್ಟಿರಿ, ಆದರೆ ಬಿಗ್ಬಾಸ್ ಮನೆಯಲ್ಲಿ ನಿಯಮ ಎಂಬುದು ಇರುತ್ತದೆ. ನೀವು ಆಯ್ಕೆ ಆಗಿದ್ದೀರೆಂದರೆ ನೀವು ಆ ಟಾಸ್ಕ್ ಮಾಡಬೇಕು, ನಿಯಮ ಮುರಿದಿದ್ದಕ್ಕೆ ನಿಮಗೆ ಶಿಕ್ಷೆ ಆಗಲಿದೆ. ಆ ಶಿಕ್ಷೆಯನ್ನು ಬಿಗ್ಬಾಸ್ ನಿರ್ಧಾರ ಮಾಡುತ್ತಾರೆ ಎಂದರು.
ಮಾತು ಮುಂದುವರೆಸಿದ ಮೋಕ್ಷಿತಾ, ‘ನನಗೆ ಮಂಜು ಮತ್ತು ಗೌತಮಿ ಅವರು ಬಕೆಟ್ ಎಂದು ಬಿರುದು ಕೊಟ್ಟಿದ್ದರು, ಹಾಗಾಗಿ ಅವರ ಬಳಿ ಹೋಗಿ ಸಹಾಯ ಕೇಳುವುದು ಬೇಡ ಎಂದುಕೊಂಡು ಸುಮ್ಮನಾದೆ’ ಎಂದರು. ಅದಕ್ಕೆ ಮೋಕ್ಷಿತಾಗೆ ಬುದ್ಧಿವಾದ ಹೇಳಿದ ಸುದೀಪ್, ‘ನೀವು ಇಲ್ಲಿ ಗೆಲ್ಲಲು ಬಂದಿದ್ದೀರೋ ಅಥವಾ ಮಂಜು ಹಾಗೂ ಗೌತಮಿ ಅವರನ್ನು ಮೆಚ್ಚಿಸಲು ಬಂದಿದ್ದೀರೋ, ಅವರು ಏನಾದರೂ ಅಂದುಕೊಳ್ಳಲಿ, ಹೇಗಾದರೂ ಆಡಿಕೊಳ್ಳಲಿ ನಿಮ್ಮ ಆಟ ನೀವು ಆಡಿ’ ಎಂದರು. ಕೊನೆಯಲ್ಲಿ ನೀವು ಆಟವನ್ನು ಚೆನ್ನಾಗಿಯೇ ಆಡುತ್ತಿದ್ದೀರಿ ಆದರೆ ಗೆಲ್ಲುವ ಗುರಿ ಮಾತ್ರವೇ ಇರಲಿ’ ಎಂದು ಸುದೀಪ್ ಹೇಳಿದರು.