ಕನ್ನಡದ ಬಿಗ್ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಉಳಿಯೋರು ಯಾರು? ಹೊರಗೆ ಬರೋರು ಯಾರು ಅನ್ನೋದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇಷ್ಟು ದಿನ ಬಿಗ್ಬಾಸ್ನಲ್ಲಿ ಆಡಿರುವುದಕ್ಕಿಂತ ಈಗ ಆಡುವುದು ಅತ್ಯಂತ ಇಂಪಾರ್ಟೆಂಟ್ ಆಗಿತ್ತು. ಸದ್ಯ ಇಂದು ರಾತ್ರಿ ನಡೆಯುವ ಕಿಚ್ಚನ ಪಂಚಾಯತಿಯೂ ಎಲ್ಲರ ಭವಿಷ್ಯವನ್ನು ನಿರ್ಧರಿಸಲಿದೆ. ನಾಮಿನೇಟ್ ಆಗಿರುವ ಸ್ಪರ್ಧಿಗಳ ಎದೆ ಢವ ಢವ ಎನ್ನಲು ಶುರು ಮಾಡಿದೆ. ಡಬಲ್ ಎಲಿಮಿನೇಷನ್ನಿಂದ ಪಾರಾದವರು ಅದೃಷ್ಟವಂತರು ಎಂದು ಹೇಳಬಹುದು.
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಡಬಲ್ ಎಲಿಮಿನೇಷನ್ ಇರುವುದು ಕನ್ಫರ್ಮ್ ಆಗಿದೆ. ಅಂದರೆ ಮನೆಯಿಂದ ಇಬ್ಬರು ಈ ವಾರ ಹೊರ ಹೋಗಲಿದ್ದಾರೆ. ಉಗ್ರಂ ಮಂಜು, ಭವ್ಯಗೌಡ, ಗೌತಮಿ ಜಾದವ್, ರಜತ್ ಕಿಶನ್, ಧನರಾಜ್ ಆಚಾರ್ ಮೇಲೆ ಡಬಲ್ ಎಲಿಮಿನೇಷನ್ ತೂಗು ಕತ್ತಿ ಇದೆ. ಇದರಲ್ಲಿ ಯಾರು ಸೇಫ್ ಆಗುತ್ತಾರೆ, ಯಾರು ಗೇಟ್ ಪಾಸ್ ತೆಗೆದುಕೊಳ್ಳುತ್ತಾರೆ ಎನ್ನುವುದು ಪ್ರೇಕ್ಷಕರಲ್ಲಿ ಕೂತುಹಲವಾಗಿದೆ.
ಕಿಚ್ಚ ಸುದೀಪ್ ಅವರು ಯಾರಿಗೆ ಸಮಾಧಾನ ಮಾಡಿ, ಮಾಡಿರುವ ತಪ್ಪುಗಳನ್ನು ಹೇಳಿ ಇಬ್ಬರನ್ನು ಹೊರಗೆ ಕಳಿಸುತ್ತಾರೆ. ಸದ್ಯಕ್ಕೆ ಆ ಸ್ಪರ್ಧಿಗಳು ಯಾರು ಎನ್ನುವುದೇ ನಿಗೂಢವಾಗಿ ಉಳಿದಿದೆ. ಇದಕ್ಕೆ ಉತ್ತರ ಇಂದು ರಾತ್ರಿ ಅಥವಾ ನಾಳೆ ರಾತ್ರಿ ಸಿಗಲಿದೆ. ಮಿಡ್ ಮೀಕ್ ಎಲಿಮಿನೇಷನ್ ಇರಲಿದೆ ಎನ್ನಲಾಗಿತ್ತು. ಆದರೆ ಧನರಾಜ್ ಮಾಡಿದ ತಪ್ಪಿನಿಂದ ಎಲ್ಲ ಹಾಳಾಯಿತು. ಹೊಸದಾಗಿ ನಾಮಿನೇಟ್ ಮಾಡಬೇಕಾಯಿತು. ಇದರಲ್ಲಿ ಐವರು ಹೆಸರುಗಳು ಹೊರ ಹೋಗುವ ಲಿಸ್ಟ್ನಲ್ಲಿವೆ. ರಜತ್ ಕಿಶನ್, ಧನರಾಜ್ ಹೊರಗಡೆ ಹೋಗ್ತಾರಾ, ಮಂಜು, ಗೌತಮಿ ಇಬ್ಬರು ಜೋಡಿಯಾಗಿ ಇದ್ದವರೇ ಮನೆ ಖಾಲಿ ಮಾಡುತ್ತಾರಾ ಅಥವಾ ಭವ್ಯ, ಧನರಾಜ್ ಮನೆಯಿಂದ ಹೊರ ಬರುತ್ತಾರಾ ಎಂದು ಕಾದು ನೋಡಬೇಕಿದೆ. ಆ ಜೋಡಿ ಯಾವುದು ಎನ್ನುವುದು ಕಿಚ್ಚನ ಪಂಚಾಯತಿಯಲ್ಲಿ ಗೊತ್ತಾಗಲಿದೆ.
ಮನೆಯ ಕ್ಯಾಪ್ಟನ್ ಆಗಿರುವ ಹನುಮಂತುಗೆ ಉತ್ತಮ ಸ್ಪರ್ಧಿ ಯಾರು ಎಂದು ನೀವು ನಾಮಿನೇಷನ್ನಿಂದ ಪಾರು ಮಾಡಬೇಕು ಎಂದು ತಿಳಿಸಲಾಗಿತ್ತು. ಇದಕ್ಕೆ ಜಾಗರೂಕತೆ ಹೆಜ್ಜೆ ಇಟ್ಟ ಹನುಂತು ಮೋಕ್ಷಿತಾ ಅವರನ್ನು ಪಾರು ಮಾಡಿದ್ದಾರೆ. ಹೀಗಾಗಿ ಮೋಕ್ಷಿತಾ ಅವರು ಹನುಮಂತುನ ಕೃಪೆಯಿಂದ ಬಿಗ್ ಬಾಸ್ ಫಿನಾಲೆ ವಾರವನ್ನು ತಲುಪಿದ್ದಾರೆ. ಆದರೆ ಈ ವಾರ ದೊಡ್ಮನೆ ಬಿಟ್ಟು ಹೊರಡುವವರು ಯಾರು ಎಂದು ಕಾದು ನೋಡಬೇಕಿದೆ.