ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಶೋ ಶುರುವಾಗಿ ಇಂದಿಗೆ 90 ದಿನಗಳು ಕಳೆದಿವೆ. ವಾರ ಕತೆ ನಡೆಸಿಕೊಡಲು ವೇದಿಕೆಗೆ ಕಿಚ್ಚ ಸುದೀಪನ ಆಗಮನವಾಗಿದೆ. ಒಟ್ಟು 17 ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಒಬ್ಬೊಬ್ಬರಾಗಿ ಬಿಗ್ಬಾಸ್ ಮನೆಯಿಂದ ಆಚೆ ಹೋದರು. ಸದ್ಯ 10 ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್, ಮಂಜು, ಗೌತಮಿ, ಮೋಕ್ಷಿತಾ, ರಜತ್, ಧನರಾಜ್, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಐಶ್ವರ್ಯಾ ಇದ್ದಾರೆ. ಈ 10 ಜನರಲ್ಲಿ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ವಾರ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಧನರಾಜ್ ಆಚಾರ್ಯ, ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ ಲಂಬಾಣಿ, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ. ಜೊತೆಗೆ ಕ್ಯಾಪ್ಟನ್ ಭವ್ಯಾ ಗೌಡಯಿಂದ ಐಶ್ವರ್ಯಾ ಸಿಂಧೋಗಿ ನೇರ ನಾಮಿನೇಟ್ ಆಗಿದ್ದಾರೆ.
ಇನ್ನೂ, ಕಳೆದ ಸಂಚಿಕೆಯಲ್ಲಿ ಯಾರು ಕೂಡ ಎಲಿಮಿನೇಟ್ ಆಗಿರಲಿಲ್ಲ. ಹೀಗಾಗಿ ಈ ವಾರ ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗುತ್ತಾ ಅಂತ ಅನುಮಾನ ಮೂಡಿದೆ. ಹಾಗೇನಾದ್ರೂ ಆದ್ರೆ ಬಿಗ್ಬಾಸ್ ಮನೆಯಲ್ಲಿ ಕೇವಲ 8 ಮಂದಿ ಉಳಿದುಕೊಳ್ಳಲಿದ್ದಾರೆ. ಇನ್ನೂ ಕಿಚ್ಚನ ಪಂಜಾಯ್ತಿಯ ಕೊನೆಯ ಹಂತದಲ್ಲಿ ಬಿಗ್ಬಾಸ್ ಟ್ವಿಸ್ಟ್ ನೀಡಲಿದ್ದಾರಾ ಅಂತ ವೀಕ್ಷಕರು ಊಹಿಸುತ್ತಿದ್ದಾರೆ. ನಾಮಿನೇಟ್ ಆದ 8 ಜನರಲ್ಲಿ ಓರ್ವ ಸ್ಪರ್ಧಿಗೆ ಬಿಗ್ಬಾಸ್ ಮನೆಯಿಂದ ಗೆಟ್ ಪಾಸ್ ನೀಡಲಿದ್ದಾರೆ ಕಿಚ್ಚ ಸುದೀಪ್.