ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸ್ಥಾನವನ್ನು ಪಡೆಯಲು ಸ್ಪರ್ಧಾಳುಗಳು ನಿತ್ಯ ವಿಭಿನ್ನವಾದ ಟಾಸ್ಕ್ಗಳನ್ನು ನೀಡಲಾಗುತ್ತದೆ ಈ ಬಾರಿ, ಟಾಸ್ಕ್ನ ಅಡಿಯಲ್ಲಿ , ಸ್ಪರ್ಧಾಳುಗಳು ತಮ್ಮ ಪರ ಮತ್ತೊಬ್ಬರು ಆಟ ಆಡಲು ವಿನಂತಿ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಮೋಕ್ಷಿತಾ ಈ ಟಾಸ್ಕ್ನಲ್ಲಿ ತಮ್ಮ ಅಹಂಕಾರವನ್ನುಬಿಡದೇ, ಗೌತಮಿಯ ಬಳಿ ತಮ್ಮ ಪರವಾಗಿ ಆಟ ಆಡಲು ಕೋರಿಕೆಯನ್ನು ಇಡಲು ನಿರಾಕರಿಸಿದ ಅವರು, “ಅವರಿಂದ ನಾನು ಕ್ಯಾಪ್ಟನ್ ಆಗುವುದಿಲ್ಲ” ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದಾರೆ.
ಈ ನಡೆ ಬಿಗ್ ಬಾಸ್ ನಿಯಮಗಳಿಗೆ ವಿರುದ್ಧವಾದ ಕಾರಣ, ಮೋಕ್ಷಿತಾ ದೊಡ್ಡ ದಂಡವನ್ನು ಹೊರುವ ಪರಿಸ್ಥಿತಿಗೆ ಸಿಲುಕಬೇಕಾಗುತ್ತದೆ ಎಂದು ಬಿಗ್ ಬಾಸ್ ಹೇ ಳಿದ್ದಾರೆ.