ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ 12ನೇ ವಾರದತ್ತ ಮುಂದುವರೆದಿದೆ. ಕಳೆದ ವಾರ ಯಾರನ್ನೂ ಕೂಡ ಹೊರಗಡೆ ಕಳಿಸಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಗಿದು ಹೋಗಿದೆ. ಈ ವಾರ ದೊಡ್ಮನೆಯಿಂದ ಹೊರಗೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.
ಟಾಸ್ಕ್ ಗೆದ್ದಿದ್ದಕ್ಕೆ ಲಕ್ಸುರಿ ಐಟಮ್ಸ್ ಮನೆಗೆ ಬಂದ್ವಾ ಎಂದು ಕಿಚ್ಚ ಸುದೀಪ್ ಅವರು ಕೇಳಿದರು. ಇದಕ್ಕೆ ಸ್ಪರ್ಧಿಗಳೆಲ್ಲ ಇಲ್ಲ ಸರ್ ಎಂದರು. ಲಕ್ಸುರಿ ಐಟಮ್ಸ್ ಯಾಕೆ ಬಂದಿಲ್ಲ ಎನ್ನುವುದಕ್ಕೆ ಸುದೀಪ್ ಅವರು ದೃಶ್ಯದ ಮೂಲಕ ತೋರಿಸಿದ್ದಾರೆ. ಜೈಲಿನಲ್ಲಿದ್ದ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಟಾಸ್ಕ್ನ ಬ್ರೇಕ್ ಮಾಡಿದ್ದರು. ಅಂದರೆ ಜೈಲಿನಿಂದ ಅವರು ಯಾರಿಗೆ ಗೊತ್ತಿಲ್ಲದಂತೆ ಹೊರಗೆ ಬಂದಿದ್ದರು. ಇದೇ ರೀಸನ್ಗೆ ಮನೆಗೆ ಲಕ್ಸುರಿ ಐಟಮ್ಸ್ ಕಳಿಸಿಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಜೈಲಿನಲ್ಲಿ ತ್ರಿವಿಕ್ರಮ್ ಜೊತೆ ಇರುವಾಗ ಮಾತನಾಡಿದ್ದ ಚೈತ್ರಾ, ನನಗೆ ಏನಾದರೂ ಕೊಡಬೇಕು. ಅವರನ್ನು ನೆಮ್ಮದಿಯಾಗಿ ಇರೋದಕ್ಕೆ ಬಿಡಲ್ಲ ಎಂದಿದ್ದರು. ನಾನು ಡಿಸೈಡ್ ಆಗಿದ್ದೇನೆ. ಇದಕ್ಕೆ ಇಬ್ಬರು ಹೊರಗೆ ಹೋಗೋಣ ಎಂದು ನಿರ್ಧಾರ ಮಾಡಿ ಹೊರಗೆ ಹೋಗಿದ್ದಾರೆ. ಇದೇ ರೀಸನ್ಗೆ ಮನೆಗೆ ಐಟಮ್ಸ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಕ್ಯಾಪ್ಟನ್ ಗೋಲ್ಡ್ ಸುರೇಶ್ ಅವರ ಅಭಿಪ್ರಾಯ ಕೇಳಿದ್ದಾರೆ. ಇದಕ್ಕೆ ಚೈತ್ರಾ ಅವರ ಮೇಲೆ ಸುರೇಶ್ ದೂರು ಹೇಳಿದ್ದಾರೆ. ಈ ರೀತಿ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಕೈ ಹಿಡ್ಕೊಂತಿನಿ, ಕಾಲು ಹಿಡ್ಕೊಂತಿನಿ ಅಂತ ಅಂದೆ. ಇಡೀ ದಿನ ಕ್ವಾಟ್ಲೆ ಕೊಟ್ಟರು. ಇಷ್ಟೊಂದು ಮೈಂಡ್ ಉಪಯೋಗಿಸಿದ್ದಾರೆಂದು ನನಗೆ ಗೊತ್ತಿರಲಿಲ್ಲ ಎಂದು ಸುರೇಶ್ ಹೇಳಿದ್ದಾರೆ.
ಇದಕ್ಕೆ ಭವ್ಯಾ ಬಳಿ ಅಭಿಪ್ರಾಯವನ್ನು ಕಿಚ್ಚ ಕೇಳಿದ್ದರು. ಇದಕ್ಕೆ ಇವರಿಬ್ಬರು ಗೊತ್ತಿದ್ದು ಮಾಡಿದ್ದಾರೆ. ಅದಕ್ಕೆ ಇನ್ನೊಂದು ದಿನ ಜೈಲಿನಲ್ಲೇ ಕಳೆಯಬೇಕು ಎಂದಿದ್ದಾರೆ. ರಜತ್ ಕೂಡ ಮಾತನಾಡಿ, ನನಗೆ ಗುಂಡು ಹೊಡಿಸಿದಂತೆ ತ್ರಿವಿಕ್ರಮ್ಗೂ ಕೂಡ ಗುಂಡು ಹೊಡಿಸಬೇಕು. ಚೈತ್ರಾ ಬಾಯಿಗೆ ಪ್ಲಾಸ್ಟರ್ ಹಾಕಿ ಕೂಡಿಸಬೇಕು ಎಂದಿದ್ದಾರೆ. ಧನರಾಜ್ ಅವರು ಮುಂದಿನ ನಾಮಿನೇಶನ್ ಅಲ್ಲಿ ನೇರ ನಾಮಿನೇಷನ್ ಆಗಬೇಕು ಎಂದರು.