ಕನ್ನಡ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ಕರ್ನಾಟಕದ ಜನತೆಗೆ ಊಹೆಗೂ ಮೀರಿದ ಒಬ್ಬ ಜನಸಾಮಾನ್ಯ ವ್ಯಕ್ತಿಯಾಗಿ ಗೋಲ್ಡ್ ಸುರೇಶ್ ಅವರು ಎಂಟ್ರಿ ಕೊಟ್ಟಿದ್ದರು. ಸೆಲೆಬ್ರಿಟಿಗಳ ನಡುವೆ ತನ್ನದೇ ಆದ ಛಾಪು ಮುಡಿಸಿಕೊಂಡು ಸುಮಾರು 11 ವಾರಗಳನ್ನು ಬಿಗ್ಬಾಸ್ ಮನೆಯಲ್ಲಿ ಪೂರ್ಣಗೊಳಿಸಿದ್ದಾರೆ. ಇನ್ನು 33 ದಿನಗಳು ಕಳೆದರೆ ಇಡೀ ಬಿಗ್ ಬಾಸ್ ಸೀಸನ್ 11 ಕೊನೆಗೊಳ್ಳುತ್ತಿತ್ತು. ಆದರೆ, ಇದೀಗ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಸ್ವತಃ ಬಿಗ್ ಬಾಸ್ ಹೇಳಿದ್ದಾರೆ. ಹೀಗಾಗಿ, ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಅವರನ್ನು ಮನೆಗೆ ಕಳುಹಿಸಲಾಗಿದೆ.
ಈ ಕುರಿತು ವಿಡಿಯೋ ಪ್ರೋಮೋ ಹಂಚಿಕೊಂಡಿದೆ ಕಲರ್ಸ್ ವಾಹಿನಿ. ಅದರಲ್ಲಿ ‘ಬಿಗ್ ಬಾಸ್ ಮನೆಯ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಅವರ ಕುಟುಂಬಕ್ಕೆ ಹೆಚ್ಚಾಗಿದೆ. ಗೋಲ್ಡ್ ಸುರೇಶ್ ಅವರೇ ಹೆಚ್ಚು ತಡ ಮಾಡದೇ ನಿಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಟ್ಟು ಬಿಗ್ ಬಾಸ್ ಮನೆಯಿಂದ ತಡಮಾಡದೇ ಹೊರಡಬೇಕಿದೆ’ ಎಂದು ತಿಳಿಸಿದ್ದಾರೆ. ಗೋಲ್ಡ್ ಸುರೇಶ್ ಕುಟುಂಬದಲ್ಲಿ ತಲೆ ದೋರಿರುವ ತುರ್ತು ಪರಿಸ್ಥಿತಿಯು ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಸರಿ ಹೋದರೆ ವಾಪಸ್ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಈ ಬಗ್ಗೆ ಬಿಗ್ ಬಾಸ್ ತಂಡದಿಂದಲೇ ಮಾಹಿತಿ ಹೊರಬರಬೇಕಿದೆ.