ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮನೆಯಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆ ನಡೆಯುತ್ತಿದ್ದು ರೂಲ್ಸ್ ಬ್ರೇಕ್ ಮಾಡಲಾಗಿದೆ. ಕಳಪೆ ಪಟ್ಟ ಕಟ್ಟಿಕೊಂಡ ತ್ರಿವಿಕ್ರಮ್, ಚೈತ್ರಾ ಕುಂದಾಪುರ ಜೈಲಿಂದ ಹೊರ ಬಂದಿದ್ದಾರೆ. ಆದರೆ ಈ ವಾರ ರಜತ್, ಧನರಾಜ್ ಅವರ ಘರ್ಷಣೆಯಾಟ ಕಿಚ್ಚನ ಪಂಚಾಯತಿಯ ಹಾಟ್ ಟಾಪಿಕ್ ಆಗಿದೆ. ಇದರ ಜೊತೆಗೆ ಈ ವಾರ ಡಬಲ್ ಎಲಿಮಿನೇಷನ್ ಇರುತ್ತಾ ಇಲ್ವಾ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಿಗ್ ಬಾಸ್ 11ರ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದಕ್ಕೆ ಕೌಂಟ್ಡೌನ್ ಶುರುವಾಗಿದೆ. 10ನೇ ವಾರದ ಕೊನೆಯಲ್ಲಿ ಐಶ್ವರ್ಯ, ಚೈತ್ರಾ ಕುಂದಾಪುರ ಡೇಂಜರ್ ಝೋನ್ನಲ್ಲಿ ಇದ್ದರು. ಆದರೆ ಕಳೆದ ವಾರ ಯಾರನ್ನು ಮನೆಯಿಂದ ಹೊರ ಕಳುಹಿಸಲಿಲ್ಲ. ಹೀಗಾಗಿ ಚೈತ್ರಾ ಹಾಗೂ ಐಶ್ವರ್ಯ ಇಬ್ಬರು ಸೇಫ್ ಆಗಿ ಮನೆಯಲ್ಲಿದ್ದರು. 11ನೇ ವಾರದ ಕೊನೆಗೆ ತನ್ನ ಆಟ ಮುಗಿಸುವ ಸ್ಪರ್ಧಿ ಯಾರು ಎನ್ನುವುದು ಇದೀಗ ಸಸ್ಪೆನ್ಸ್ ಆಗಿದೆ. ಇದಕ್ಕೆ ಉತ್ತರ ಇಂದಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಉತ್ತರ ನೀಡುತ್ತಾರೆ.
ಈ ಸೀಸನ್ನಲ್ಲಿ ಸ್ಪರ್ಧಿಗಳಾದ ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್, ಹನುಮಂತ ಹಾಗೂ ಚೈತ್ರಾ ಕುಂದಾಪುರ ಈ 8 ಮಂದಿ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಅಲ್ಲದೇ ಕ್ಯಾಪ್ಟನ್ ಗೌತಮಿ ಜಾಧವ್ ನೇರವಾಗಿ ಮೋಕ್ಷಿತಾ ಪೈ ಅವರನ್ನ ನಾಮಿನೇಟ್ ಮಾಡಿದ್ದಾರೆ. ಈ ವಾರ ಒಬ್ಬರಂತೂ ಬಿಗ್ಬಾಸ್ ಮನೆಯಿಂದ ಆಚೆ ಬರೋದು ಪಕ್ಕಾ ಎನ್ನಬಹುದು. ಕಳೆದ ವಾರ ಯಾವ ಸ್ಪರ್ಧಿಯೂ ಮನೆಯಿಂದ ಹೊರ ಬಂದಿರಲಿಲ್ಲ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇರುತ್ತಾ ಅಥವಾ ಕೊನೆ ಕ್ಷಣದಲ್ಲಿ ಮತ್ತೆ ಬಿಗ್ಟ್ವಿಸ್ಟ್ ಇರುತ್ತಾ ಎಂದು ಇನ್ನೇನು ಗೊತ್ತಾಗಲಿದೆ.