ಕನ್ನಡದ ಬಿಗ್ ರಿಲಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 11’ರ ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಸಾಕಷ್ಟು ತಿರುವುಗಳನ್ನು ಪಡೆದು 90ನೇ ದಿನದತ್ತ ಮುನ್ನುಗ್ಗುತ್ತಿರುವ ಶೋನಲ್ಲಿ ವೇದಿಕೆಯ ಮೇಲೆ ಮತ್ತೆ ಗೋಲ್ಡ್ ಸುರೇಶ್ ಪ್ರತ್ಯಕ್ಷರಾಗಿದ್ದಾರೆ. ಆಟ ಆಡಲು ಅವರಿಗೆ 2ನೇ ಚಾನ್ಸ್ ಸಿಕ್ಕಿದ್ಯಾ? ಹೇಗೆ ಎಂಬ ರೋಚಕ ಪ್ರೋಮೋವೊಂದನ್ನು ಹಂಚಿಕೊಂಡಿದ್ದಾರೆ ಕಲರ್ಸ್ ವಾಹಿನಿ.
ವಾರದ ಕತೆ ಕಿಚ್ಚನ ಜೊತೆಯಲ್ಲಿ ಸುದೀಪ್ ಟಾಸ್ಕ್ವೊಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳಲ್ಲಿ ಯಾರನ್ನಾದರೂ ತಟ್ಟಿ ಬುದ್ಧಿ ಹೇಳುವ ಚಾನ್ಸ್ ನೀಡಿದ್ದಾರೆ. ಈ ವೇಳೆ, ಮಾತನಾಡಿದ್ರೆ ಫೌಲ್ ಕೊಡ್ತಿಯಾ? ಅಂತ ತಟ್ಟಿ ಹೇಳಿದ್ದಾರೆ ರಜತ್, ಆ ನಂತರ ಜ್ಞಾನೋದಯ ಮಾಡ್ತೀನಿ ಅಂತ ಹೇಳಿ ಇಡೀ ಮನೆಯ ಸುದ್ದಿ ಮಾತನಾಡುತ್ತಾರೆ ಎಂದು ಹನುಮಂತ ಸುದೀಪ್ ಮುಂದೆ ಧನರಾಜ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ, ಬಿಗ್ಬಾಸ್ ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ಬಿಗ್ ಬಾಸ್ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎಂಟ್ರಿಗೆ ಸುದೀಪ್, ಮನೆಯೊಳಗೆ ನೀವಿಲ್ಲದೇ ಒಂದು ಜಾಗ ಖಾಲಿ ಹೊಡೆಯುತ್ತಿದೆ ಎಂದಿದ್ದಾರೆ. ಅದಕ್ಕೆ ಸುರೇಶ್ ಈ ಕ್ಷಣನೂ ಮನೆಯೊಳಗೆ ಹೋಗು ಅಂದರೆ ಖುಷಿಯಿಂದ ಹೋಗುತ್ತೇನೆ ಎಂದಿದ್ದಾರೆ. ಆಗ ಮನೆ ಮಂದಿಯೆಲ್ಲಾ ಶಾಕ್ನಿಂದ ನೋಡಿದ್ದಾರೆ. ಆದರೆ ದೊಡ್ಮನೆಯ ಸ್ಪರ್ಧಿಯಾಗಿ ಸುರೇಶ್ ಕಾಲಿಟ್ಟಿದ್ದಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.