ಕನ್ನಡದ ಬಿಗ್ಬಾಸ್ ಶೋವನ್ನು ಇಡೀ ಕರ್ನಾಟಕದ ಜನತೆ ಇಷ್ಟ ಪಟ್ಟು ನೋಡುತ್ತಾರೆ. ಕನ್ನಡಿಗರು ಮಾತ್ರವಲ್ಲದೇ ಪರಭಾಷಿಕರು ಕೂಡ ಕನ್ನಡ ಬಿಗ್ ಬಾಸ್ ವೀಕ್ಷಣೆ ಮಾಡ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭವಾಗಿ 10 ವಾರ ಸಮೀಪಿಸಿದೆ. ಆಟ ರಂಗೇರುತ್ತಿದ್ದು, ಸ್ಪರ್ಧಿಗಳ ಅಸಲಿತನ ಹೊರ ಬರುತ್ತಿದೆ. ವೀಕೆಂಡ್ ಬಂದಾಗಿದೆ. ಬಿಗ್ಬಾಸ್ ವೇದಿಕೆಗೆ ಕಿಚ್ಚನ ಎಂಟ್ರಿಯಾಗಿದೆ. ಫ್ಯಾನ್ಸ್ಗಳು ರಾತ್ರಿ 9 ಗಂಟೆಗಾಗಿ ಎಕ್ಸೈಟಾಗಿದ್ದಾರೆ. ಇದೀಗ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿದ್ದು, ವೀಕ್ಷಕರ ಕ್ಯೂರಿಯಾಸಿಟಿ ದುಪಟ್ಟಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ನಾಟಕೀಯ ತಿರುವುಗಳು ಕ್ಯಾಪ್ಟನ್ಸಿ ರೇಸ್ ವಿಚಾರದಲ್ಲಿ ನಡೆದಿವೆ. ಅಲ್ಲದೆ, ಅಚ್ಚರಿ ಅಭ್ಯರ್ಥಿ ಗೌತಮಿ ಜಾಧವ್. ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಇದು ಮೋಕ್ಷಿತಾ ಪೈ ಅವರಿಗೆ ಬೇಸರಕ್ಕೆ ಕಾರಣವಾಗಿದೆ. ಇನ್ನು ವಾರಪೂರ್ತಿ ಗೌತಮಿ ಕ್ಯಾಪ್ಟನ್ಸಿಯಲ್ಲಿ ಆಟ ಆಡಬೇಕು ಎಂದರೆ, ಮೋಕ್ಷಿತಾ ಪರಿಸ್ಥಿತಿ ಮುಂದೆ ಹೇಗೋ ಏನೋ ಎನ್ನುವಂತಾಗಿದೆ. ಇದೀಗ ಬೆಸ್ಟ್ ಫ್ರೆಂಡ್ಸ್ ಆಗಿದ್ದ ಮೋಕ್ಷಿತಾ ಮತ್ತು ಗೌತಮಿ ನಡುವಿನ ಮನಸ್ತಾಪಗಳು ಎಲ್ಲರೆದುರು ಬಹಿರಂಗಗೊಳ್ಳುತ್ತಿವೆ. ಅದರಂತೆ ಇದೀಗ ಮೋಕ್ಷಿತಾ ತೆಗೆದುಕೊಂಡ ಆ ಒಂದು ನಿರ್ಧಾರ ಅವರಿಗೇನೇ ಮುಳುವಾಗಿದೆ. ಸಂಭಾವ್ಯ ಕ್ಯಾಪ್ಟನ್ಸಿ ಪಟ್ಟವನ್ನು ಅವರು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಗೌತಮಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಇದರ ಮಧ್ಯೆ ವಾರದ ಕಥೆ ಕಿಚ್ಚನ ಜೊತೆ ಪ್ರೋಮೋ ರಿಲೀಸ್ ಆಗಿದೆ. ಈ ವಾರ ಚರ್ಚೆ ಆಗಲಿರುವ ವಿಚಾರಗಳ ಬಗ್ಗೆ ವೀಕ್ಷಕರಿಗೆ ಸುಳಿವು ಕೊಟ್ಟಿದ್ದಾರೆ. ‘ಅರ್ಥ ಆಯ್ತಾ, ಅರ್ಥ ಆಯ್ತಾ ಎಂದು ಊರಿಗೆಲ್ಲ ಕೇಳ್ತಿರೋ ಒಬ್ಬರಿಗೆ ಇನ್ನೂ ಬಿಗ್ಬಾಸ್ ಅನ್ನೋ ರಿಯಲ್ ಗೇಮ್ ಅರ್ಥ ಆಗಿಲ್ಲ. ಈ ಗೇಮ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಅಂತಾ ಬ್ರಮೆಯಲ್ಲಿ ಇರೋರಿಗೆ.., ಬಿಗ್ಬಾಸ್ ಮೇಲಿನ ನಿರ್ಧಾರಗಳ ಮೇಲೆ ರೆಸ್ಪೆಕ್ಟ್ ಇಲ್ಲ’ ಎಂದು ಸುದೀಪ್ ಡೈಲಾಗ್ ಹೊಡೆದಿದ್ದಾರೆ.
ಪ್ರೊಮೋದಲ್ಲಿ ಮೋಕ್ಷಿತಾ, ವಿಕ್ರಮ್ ಪ್ರಮುಖವಾಗಿ ಹೈಲೈಟ್ಸ್ ಆಗಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಶೋ ಕ್ವಿಟ್ ಮಾಡಿ ಹೊರ ಹೋಗಿದ್ದರು. ಈ ವೇಳೆ ತ್ರಿವಿಕ್ರಮ್ ಆಡಿರುವ ಮಾತುಗಳಿಗೂ ಸುದೀಪ್ ಕೆರಳಿ ಕಂಡವಾದಂತಿದೆ. ಸ್ಪರ್ಧಿಗಳಿಗೆ ಬಿಗ್ಬಾಸ್ ಮೇಲಿನ ನಿರ್ಧಾರಗಳಿಗೆ ರೆಸ್ಪೆಕ್ಟ್ ಇಲ್ಲ ಎಂದಿದ್ದಾರೆ.
ಇದನ್ನೆಲ್ಲ ಗಮನಿಸಿದರೆ ಮೊನ್ನೆ ನಡೆದ ಎಲ್ಲ ಬೆಳವಣಿಗೆಗಳ ಬಗ್ಗೆ ಕಿಚ್ಚ ಸುದೀಪ್ ಅವರು ಇಂದಿನ ಎಪಿಸೋಡ್ನಲ್ಲಿ ಮಾತನಾಡುವ ಸಾಧ್ಯತೆಯಿದೆ. ಈ ವಾರ ಎಲೀಮಿನೇಷನ್ ಇರುತ್ತಾ ಇಲ್ಲವಾ ಇದೆಲ್ಲದರ ಉತ್ತರಕ್ಕೆ ಇಂದಿನ ಎಪಿಸೋಡ್ನಲ್ಲಿ ಕಾದುನೋಡಬೇಕಿದೆ.