ಕರ್ನಾಟಕದಲ್ಲಿ ವಾಹಿನಿಯ ಸದ್ಯದ ಟ್ರೆಂಡಿಂಗ್ ಕಾರ್ಯಕ್ರಮ, ಕನ್ನಡದ ಸದ್ಯದ ನಂಬರ್ 1 ಕಾರ್ಯಕ್ರಮ, ಬಿಗ್ ಬಾಸ್ ಶೋ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ನಮಗೆಲ್ಲಾ ತಿಳಿದಿರೋ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋ 3 ತಿಂಗಳ ಕಾಲ ಪ್ರಸಾರವಾಗುತ್ತೆ. 100 ದಿನಗಳ ಕಾಲ ಪ್ರಸಾರವಾಗೋ ಈ ಶೋ ಇತ್ತೀಚಿನ ದಿನಗಳಲ್ಲಿ 120 ಎಪಿಸೋಡ್ಗಳ ವರೆಗೂ ಹೋಗಿದ್ದು ಇದೆ. ಆದ್ರೆ ಈ ಬಾರಿ ಅಷ್ಟು ದಿನ ಎಲ್ಲಾ ಹೋಗದೇ ನೂರೇ ದಿನಕ್ಕೆ ಬಿಗ್ ಬಾಸ್ ಮುಕ್ತಾಯವಾಗೋ ಸಾಧ್ಯತೆ ಇದೆ.
ಬಿಗ್ ಬಾಸ್ ಈ ಸೀಸನ್ ಈಗಾಗ್ಲೆ 75 ದಿನಗಳನ್ನ ಕಂಪ್ಲೀಟ್ ಮಾಡಿದ್ದು, ಇನ್ನು ಕೇವಲ ಒಂದೇ ತಿಂಗಳು ಅಂದ್ರೆ ಅಂದಾಜು 30 ದಿನಗಳಲ್ಲಿ ಮುಗಿಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಪೂರಕವಾಗಿ ಕಲರ್ಸ್ ಕನ್ನಡ ವಾಹಿನಿಯೂ ಒಂದು ಹೊಸ ರಿಯಾಲಿಟಿ ಶೋನ ಪ್ರೊಮೊ ಬಿಡುಗಡೆ ಮಾಡಿದೆ.
ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ಸೀರಿಸ್ ಮಜಾ ಟಾಕೀಸ್ನ ಹೊಸ ಸೀಸನ್ ನ ಪ್ರೊಮೊ ರಿಲೀಸ್ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವೀಕೆಂಡ್ನ ಎಂಟರ್ಟೈನ್ ಮಾಡ್ತಿದ್ದ ಮಜಾ ಟಾಕೀಸ್ನ ಹೊಸ ಸೀಸನ್ ಬರ್ತಾ ಇದೆ. ಸೃಜನ್ ಲೋಕೇಶ್ ನಿರೂಪಣೆಯಲ್ಲಿ, ಅವ್ರದ್ದೇ ನಿರ್ಮಾಣ ಸಂಸ್ಥೆ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ತಯಾರಾಗುವ ಹೊಸ ಪ್ರೊಮೊ ರಿಲೀಸ್ ಆಗಿದೆ.
ಸಧ್ಯ ಈ ಪ್ರೋಮೊದಲ್ಲಿ ಅತೀ ಶೀಘ್ರದಲ್ಲಿ ಅಂತಿದ್ದು, ಬಿಗ್ ಬಾಸ್ ಮುಕ್ತಾಯದ ಸೂಚನೆ ನೀಡ್ತಾ ಇದ್ಯಾ ಅನ್ನೋ ಟಾಕ್ ಶುರುವಾಗಿದೆ. ಆದರೇ ಮಜಾ ಟಾಕೀಸ್ ಇಲ್ಲಿಯವರೆಗೂ ವೀಕೆಂಡ್ ಸಂಜೆ 7:30ಕ್ಕೆ ಪ್ರಸಾರವಾಗಿದ್ದು, ಇನ್ಮುಂದೆಯೂ 7: 30ಕ್ಕೆ ಪ್ರಸಾರವಾಗೋದು ಕನ್ಫರ್ಮ್ ಆದ್ರೆ ಮಜಾ ಟಾಕೀಸ್ ಬಿಗ್ ಬಾಸ್ ಮುಗಿಯೋ ಮುನ್ನವೇ ಶುರುವಾಗಲಿದೆ. ಆಗ ಸಂಜೆ 7:30ಕ್ಕೆ ಮಜಾ ಟಾಕೀಸ್, ರಾತ್ರಿ 9ಕ್ಕೆ ಬಿಗ್ ಬಾಸ್ ಎಂದಿನಂತೆ ಪ್ರಸಾರವಾಗಲಿದೆ.
ಸದ್ಯ ಈ ಬಾರಿಯ ಬಿಗ್ ಬಾಸ್ ನಿಂದಾಗಿ ಕಲರ್ಸ್ ಕನ್ನಡ ವಾಹಿನಿಗೆ ಲಾಭವೇ ಆಗಿದ್ದು, ಉತ್ತಮ ರೇಟಿಂಗ್ ಜೊತೆಗೆ ಕನ್ನಡದ ಟಾಪ್ ಶೋ ಆಗಿದೆ. ಹಾಗಾಗಿ ಈ ಶೋಗೆ ಭೂಸ್ಟ್ ನೀಡುವ ಶೋ ಆಗಿ ಸೃಜನ್ ಲೋಕೇಶ್ ನಿರ್ಮಾಣದ ಮಜಾ ಟಾಕೀಸ್ ಬರಬಹುದು ಎನ್ನಲಾಗ್ತಿದೆ. ಸದ್ಯ ವಾರದ ಏಳೂ ದಿನವೂ ಬಿಗ್ ಬಾಸ್ ಶೋಗೂ ಮೊದಲು ಸೀರಿಯಲ್ಗಳು ಪ್ರಸಾರವಾಗ್ತಾ ಇದ್ದು, ಈ ಜಾಗಕ್ಕೆ ಮಜಾ ಟಾಕೀಸ್ ವೀಕೆಂಡ್ನಲ್ಲಿ ಬರಲಿದೆ. ಹಾಗಾಗಿ ಮಜಾ ಟಾಕೀಸ್ನ ಜೊತೆಗೆ ಬಿಗ್ ಬಾಸ್ನ ಭರ್ಜರಿ ಎಂಟರ್ಟೈನ್ಮೆಂಟ್ ಜನರಿಗೆ ಸಿಗಲಿದೆ.
ಬಿಗ್ ಬಾಸ್ ನಲ್ಲಿ ಕಳೆದ 2 ವಾರದಿಂದ ನಾಮಿನೇಟ್ ಆದ ಯಾರೂ ಕೂಡ ಎಲಿಮಿನೇಟ್ ಆಗಿಲ್ಲ, ಒಂಭತ್ತನೇ ವಾರ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ತಾನೇ ಹೊರಗೆ ಬರೋದಾಗಿ ಹಠ ಹಿಡಿದು ಹೊರಬಂದ್ರು, ಹತ್ತನೇ ವಾರ ಬಿಗ್ ಬಾಸ್ ಓಟಿಂಗ್ ಲೈನ್ನೇ ಓಪನ್ ಮಾಡಿಲ್ಲ, ಫಿನಾಲೆ ಇನ್ನು ಜಸ್ಟ್ 4 ವಾರ ಬಾಕಿ ಇರೋದ್ರಿಂದ, ಮನೆಯಲ್ಲಿ ಇನ್ನೂ 12 ಜನ ಇರೋದ್ರಿಂದ, ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ.