ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ನ ಪ್ರತಿ ಸೀಸನ್ನಲ್ಲಿ ಒಂದು ಬಾರಿ ಡಬಲ್ ಎಲಿಮಿನೇಷನ್ ನಡೆಸಲಾಗುತ್ತದೆ. ಡಬಲ್ ಎಲಿಮಿನೇಷನ್ ನಡೆಸುವ ಮುನ್ನ ಅದರ ಹಿಂದಿನ ವಾರ ಯಾರು ಎಲಿಮಿನೇಟ್ಆಗಿರುವುದಿಲ್ಲ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಕಳೆದ ವಾರ ಯಾವುದೇ ಕಾರಣ ನೀಡಿರದೆ ಎಲಿಮಿನೇಷನ್ ಪ್ರಕ್ರಿಯೆ ನಡೆಸಿಲ್ಲ. ಇದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯೋದು ಫಿಕ್ಸ್ ಅಂತನೇ ಹೇಳಬಹುದು.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಂದೂ ಕಾಣದ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಕಳೆದ ಸೀಸನ್ನ ಸ್ಪರ್ಧಿಗಳು ಈ ಸೇಸನ್ ಗೆ ಬಂದು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಕಾರ್ತಿಕ್, ನಮ್ರತಾ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಮೊದಲಾದವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಎಲ್ಲರನ್ನೂ ಸಂತೋಷ ಪಡಿಸುವುದರ ಜೊತೆಗೆ, ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ 11 ಸ್ಪರ್ಧಿಗಳ ಪೈಕಿ ಈ ವಾರ ಬಹುತೇಕ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ನಲ್ಲಿ ಇದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧನರಾಜ್, ಶಿಶಿರ್ ಹಾಗೂ ಚೈತ್ರಾಗೆ ಹೆಚ್ಚಿನ ಭಯ ಇದೆ.
ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದೇ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಡಬಲ್ ಎಲಿಮಿನೇಷನ್ ನಡೆದರೆ ದೊಡ್ಮನೆಯ ಸ್ಪರ್ಧಿಗಳ ಸಂಖ್ಯೆ 10ಕ್ಕೆ ಇಳಿಯುತ್ತದೆ. ಆ ಬಳಿಕ ಆಟ ಮತ್ತಷ್ಟು ಆಸಕ್ತಿ ಕಳೆದುಕೊಳ್ಳುತ್ತದೆ.