ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಸೀಸನ್ 11ರಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ನಾಮಿನೇಟ್ ಆಗದಿದ್ದರೂ ಗೋಲ್ಡ್ ಸುರೇಶ್ ಮನೆಯಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಮರ್ಜೆನ್ಸಿ ಲೆಟರ್ ಬಂದ ಹಿನ್ನೆಲೆಯಲ್ಲಿ ಸುರೇಶ್ ಹೊರಕ್ಕೆ ಬಂದಿದ್ದಾರೆ. ಕುತೂಹಲ ಮೂಡಿಸಿದೆ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರ ಈ ಒಂದು ನಿರ್ಧಾರ. ವೈಯುಕ್ತಿಕ ಕಾರಣಗಳಿಂದ ತಾವೇ ಹೊರಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು ಗೋಲ್ಡ್ ಸುರೇಶ್ ಅವರು. ಆದರೆ ದಿಢೀರ್ ಎಂದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರೋ ಮಾಹಿತಿ ಗ್ಯಾರಂಟಿ ನ್ಯೂಸ್ಗೆ ಲಭ್ಯವಾಗಿದೆ. ಎಲಿಮಿನೇಟ್ ಆಗದೇ ಇದ್ರೂ ತಾವೇ ಹೊರಗೆ ಬಂದಿದ್ದಾರೆ ಸುರೇಶ್ ಅವರು. ವೈಯುಕ್ತಿಕ ಕಾರಣ ನೀಡಿ ಹೊರಗೆ ಬಂದಿದ್ದಾರೆ. ಹಾಗಿದ್ರೆ ಈ ಬಾರಿ ಬಿಗ್ ಬಾಸ್ನಿಂದ ಎಲಿಮಿನೇಟ್ ಆಗೋದು ಯಾರು.? ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಗೋಲ್ಡ್ ಸುರೇಶ್ ವೈಯುಕ್ತಿಕ ಕಾರಣದಿಂದ ಮಾತ್ರ ಹೊರಕ್ಕೆ ಬಂದಿದ್ದಾರೆ. ಹೊರಗೆ ಬಂದರೂ ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತಾರಾ.? ಎಂಬುದು ಇನ್ನೂ ತಿಳಿದು ಬಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಗೋಲ್ಡ್ ಸುರೇಶ್ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.