ಒಂಬತ್ತು ವಾರಗಳನ್ನು ಯಶಸ್ವಿಯಾಗಿ ಮುಗಿಸಿ 10ನೇ ವಾರದತ್ತ ಹೆಜ್ಜೆ ಇಡುತ್ತಿರುವ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ ಮೊದ ಮೊದಲು ಬರೀ ಜಗಳ, ಜಂಜಾಟ, ಗಲಾಟೆ ಎಂದೆಲ್ಲಾ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈಗ ಜನ ಹೆಚ್ಚಾಗಿ ನೋಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆ ಸುದ್ದಿಯಲ್ಲಿರುವುದೇ ಬೇರೆ ವಿಷಯಕ್ಕೆ. ಹೌದು.. ಬಿಗ್ ಬಾಸ್ ಮನೆಗೆ ಬೆಂಕಿ ಇಡುತ್ತೇನೆ ಎಂದು ಯುವಕ ಪುಂಡಾಟ ಮೆರೆದಿದ್ದಾನೆ.
ಬಿಗ್ ಬಾಸ್ ಮನೆಯ ಹೊರಗೆ ಯುವಕನೊಬ್ಬ ಮನೆಗೆ ಬೆಂಕಿ ಹುಚ್ಚುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಯುವಕನೊಬ್ಬ ಹಲವು ದಿನಗಳಿಂದ ಬಿಗ್ ಬಾಸ್ ಮನೆಯ ಹೊರಗಿನ ಗೇಟ್ ಬಳಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ. ಈಗ ಇದೇ ಯುವಕ ಮನೆ ಮುಂದೆ ಪಟಾಕಿ ಹಚ್ಚಿದ್ದೇನೆ ಮುಂದಿನ ಸೀಜನ್ನಲ್ಲಿ ನನ್ನನ್ನು ಮನೆಯೊಳಗೆ ಕರೆದಿಲ್ಲ ಎಂದರೆ ಮನೆಗೆ ಬೆಂಕಿ ಹಚ್ಚುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. mummy_ashok16 ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋಗಳನ್ನ ಹಂಚಿಕೊಳ್ಳಲಾಗಿದೆ.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ತಲೆ ಇಲ್ಲ ಎಂದುಕೊಂಡಿದ್ದೆ. ನೋಡಿದರೆ ಬಿಗ್ ಬಾಸ್ಗೆ ತಲೆ ಇಲ್ಲ. ಯಾರನ್ನ ಮನೆಯೊಳಗೆ ಕರೆಯಬೇಕು ಯಾರನ್ನು ಕರೆಯಬಾರದು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದಿರುವ ಈ ಯುವಕ ಪ್ರತಿ ಬಾರಿಯೂ ಬಿಗ್ ಬಾಸ್ ಮನೆ ಮುಂದೆ ನಿಂತು ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಅದಕ್ಕೆಲ್ಲಾ ಹಾಡು ಹಾಕಿ ವಿಡಿಯೋ ಪೋಸ್ಟ್ ಮಾಡುತ್ತಿದ್ದ.
ಈ ಬಾರಿ ಬಿಗ್ ಬಾಸ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವರನ್ನು ಸ್ಪರ್ಧಿಗಳಾಗಿ ತೆಗೆದುಕೊಳ್ಳುತ್ತಾರೆ ಎನ್ನುವ ಸುದ್ದಿ ಜನರಲ್ಲಿ ಹರಿದಾಡಿತ್ತು. ಹೀಗಾಗಿ ಯುವಕ ತಾನೂ ವೈರಲ್ ಆಗಬೇಕೆಂದು ಹಲವಾರು ರೀತಿಯ ವೈರಲ್ ವಿಡಿಯೋ ಮಾಡಿ ಹರಿಬಿಡುತ್ತಿದ್ದ. ಆದರೆ ಈ ಬಾರಿ ಬಿಗ್ ಬಾಸ್ ಆರಂಭವಾದ ದಿನದಿಂದಲೂ ಮನೆಯ ಮುಂದೆಯೇ ವಿಡಿಯೋ ಮಾಡಿದ್ದು ತನ್ನನ್ನು ಒಳಗೆ ಕರೆದುಕೊಳ್ಳುವಂತೆ ಬಿಗ್ ಬಾಸ್ ಬಳಿ ಹೇಳುತ್ತಿದ್ದ.
ಆದರೆ ಈ ಬಾರಿ ಬಿಗ್ ಬಾಸ್ ಮನೆಗೆ ಬೆಂಕಿ ಹುಚ್ಚುತ್ತೇನೆ ಎಂದು ಹೇಳಿದ್ದಾನೆ. ಈತನ ಈ ದುರ್ವರ್ತನೆಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದು, ಹೀಗೆ ಮಾಡಿದರೆ ಮುಂದಿನ ಸೀಸನ್ ನೀನು ಜೈಲಿನಲ್ಲಿ ಇರುತ್ತೀಯಾ ಎಂದಿದ್ದಾರೆ.