ಕನ್ನಡದ ಬಾದ್ಷಾ ಸುದೀಪ್ ಅವರ ತಾಯಿ ಅಗಲಿಕೆಯ ನೋವಿನಲ್ಲೂ ಕಾಯಕವೇ ಕೈಲಾಸ ಎನ್ನುವ ತತ್ವವನ್ನ ಮರೆತಿಲ್ಲಾ ಕಿಚ್ಚ ಸುದೀಪ್. ಹೌದು.. ಸುದೀಪ್ ಅವರು ಈ ವಾರ ಬಿಗ್ಬಾಸ್ ವೇದಿಕೆಗೆ ಆಗಮಿಸಿದ್ದಾರೆ ಹಾಗೂ ಕಾರ್ಯಕ್ರಮವನ್ನೂ ಸಹ ನಡೆಸಿಕೊಟ್ಟಿದ್ದಾರೆ. ತಾಯಿ ಹೇಳಿಕೊಟ್ಟ ಪರಿಪಾಠದಂತೆ ಸುದೀಪ್ ಕೆಲಸಕ್ಕೆ ಹಾಜರಾಗಿದ್ದಾರೆ.
ಕಿಚ್ಚನ ಕೆಲಸದ ಬದ್ದತೆಗೆ ಹ್ಯಾಟ್ಸಾಫ್ ಹೇಳಲೇಬೇಕು. ಅಮ್ಮನ ಅಗಲಿಕೆಯ ನೋವಲ್ಲೂ ಕೆಲಸಕ್ಕೆ ಬಾದ್ ಷಾ ಸುದೀಪ್ ಅವರು ಹಾಜರಾಗಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಸುದೀಪ್ ಬಂದಿರುವುದರ ವಿಡಿಯೋ ಹಂಚಿಕೊಂಡಿದ್ದಾರೆ ಕಲರ್ಸ್ ವಾಹಿನಿಯವರು.
ವೇದಿಕೆಯ ಮೇಲೆ ಸುದೀಪ್ ಅವರ ತಾಯಿಗೆ ಶ್ರದ್ದಾಂಜಲಿಯನ್ನ ಸಲ್ಲಿಸುತ್ತಾರೆ ಬಿಗ್ಬಾಸ್. ವಾಸುಕಿ ವೈಭವ್ ಅವರು ಸಹ ಪರಪಂಚ ನೀನೇ ಎನ್ನುವ ಹಾಡನ್ನ ಹಾಡುವ ಮೂಲಕ ಕಿಚ್ಚ ಸುದೀಪ್ ಅವರ ತಾಯಿಗೆ ಭಾವ ಪೂರ್ಣವಾಗಿ ನಮನ ಸಲ್ಲಿಸಿದ್ದಾರೆ.
ವೇದಿಕೆಯ ಮೇಲೆಯೇ ಕಿಚ್ಚ ಸುದೀಪ್ ಅವರು ಭಾವುಕಾರಾಗಿರುವುದು ಕಂಡುಬಂದಿದೆ. ಮನಸ್ಸು ಭಾರವಾಗಿದ್ರೂ ಜವಾಬ್ದಾರಿ ನಿಭಾಯಿಸೋಕೆ ಹಾಜರಾಗಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್. ಮಾಣಿಕ್ಯನ ಅಮ್ಮನಿಗೆ ಬಿಗ್ ಬಾಸ್ ಮನೆಯಲ್ಲಿ ನಮನ ಕಾರ್ಯಕ್ರಮ ನಡೆದಿದೆ. ಕಣ್ಣೀರಾಕಿದ ಸುದೀಪ್ ಅವರನ್ನ ನೋಡಿ , ಬಿಗ್ ಬಾಸ್ ಸ್ಪರ್ಧಿಗಳು ಸಹ ಭಾವುಕರಾಗಿದ್ದಾರೆ.