ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳು 12ನೇ ವಾರಕ್ಕೆ ರೊಚ್ಚಿಗೆದ್ದು ಆಟವಾಡುತ್ತಿದ್ದಾರೆ. ಇಷ್ಟು ದಿನ ನಡೆದಿದ್ದು ಒಂದು ಆಟ ಇನ್ಮುಂದೆ ನಡೆಯೋದೇ ಬೇರೆ ಆಟ ಎನ್ನುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿರೋದು ಈ ವಾರದ ನಾಮಿನೇಷನ್ ಪ್ರಕ್ರಿಯೆ. ಟಾಸ್ಕ್ಗಳಲ್ಲಿ ತ್ರಿವಿಕ್ರಮ್ ಅವರ ಕರ್ನಾಟಕ ಖದರ್ ಹಾಗೂ ರಜತ್ ನಾಯಕತ್ವದ ಕರುನಾಡ ಕಿಲಾಡಿಗಳು ತಂಡದ ಜಿದ್ದಾಜಿದ್ದಿ ಜೋರಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಶಿಶಿರ್ ಅವರು ಎಲಿಮಿನೇಟ್ ಆಗಿದ್ದರು. ಶಿಶಿರ್ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಸದಸ್ಯರ ಮಧ್ಯೆ ಹೊಸ ಕಿಚ್ಚು ಹಚ್ಚಿತ್ತು. ಶಿಶಿರ್ ಹಾಗೂ ಐಶ್ವರ್ಯಾ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಶಿಶಿರ್ ಔಟ್ ಆಗಿದ್ದಕ್ಕೆ ಬೇಸರಗೊಂಡಿದ್ದ ಐಶ್ವರ್ಯಾ ಅವರು ಶಿಶಿರ್ ಅವರನ್ನು ನಾಮಿನೇಟ್ ಮಾಡಿದವರ ಕೂಗಾಡಿದ್ದರು.
ಶಿಶಿರ್ ಮೇಲೆ ಇಲ್ಲದಿರೋ ಅಪವಾದ ಹಾಕಿದ್ದೀಯಾ. ನೀನೇ ಟಾರ್ಗೆಟ್ ಮಾಡಿದ್ದು ಎಂದು ಭವ್ಯಾ ಗೌಡ ಅವರ ಮೇಲೆ ಐಶ್ವರ್ಯಾ ಕೂಗಾಡಿದ್ದಾರೆ. ಇದಕ್ಕೆ ಸಿಟ್ಟಾದ ಭವ್ಯಾ, ನೀನೇ ಶಿಶಿರ್ನ ಟಾರ್ಗೆಟ್ ಮಾಡಿ ಗೇಟ್ ಎದುರು ತಂದು ನಿಲ್ಲಿಸಿದ್ದು ಎಂದು ಆರೋಪಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಶಿಶಿರ್ ಅವರು ಹೋದ ಮೇಲೆ ಐಶ್ವರ್ಯಾ ಅವರ ಈ ಮಾತು ಸಾಕಷ್ಟು ಚರ್ಚೆಯ ವಿಷಯವಾಗಿದೆ. ಐಶ್ವರ್ಯಾ ಅವರ ಮಾತಿಗೆ ಸಿಟ್ಟಿಗೆದ್ದಿರುವ ಭವ್ಯಾ, ತ್ರಿವಿಕ್ರಮ್, ಗೌತಮಿ, ಮಂಜು ನಾಮಿನೇಟ್ ಮಾಡಿದ್ದಾರೆ.
ಆದ್ದರಿಂದ ಐಶ್ವರ್ಯಾ ನಿನ್ನೆ ಕನ್ಫೇಷನ್ ರೂಮ್ಗೆ ಹೋಗಿ ಬಿಗ್ ಬಾಸ್ ಮುಂದೆ ಐಶ್ವರ್ಯಾ ಆರೋಪ ಮಾಡಿದ್ದಾರೆ. ಬೇಕಂತಾ ನನ್ನ ಟಾರ್ಗೆಟ್ ಮಾಡ್ತಿದ್ದಾರೆ ಬಿಗ್ಬಾಸ್ .ಪ್ಲಾನ್ ಮಾಡಕೊಂಡು ಭವ್ಯಾ, ತ್ರಿವಿಕ್ರಮ್, ಗೌತಮಿ, ಮಂಜು ಅವರೆಲ್ಲ ನನ್ನ ನಾಮಿನೇಟ್ ಮಾಡ್ತಿದ್ದಾರೆಂದು ಐಶ್ವರ್ಯಾ ಬೇಸರದಲ್ಲಿ ಹೇಳಿಕೊಂಡಿದ್ದಾರೆ.