ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜನ್ ಸೂರಜ್ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧವನ್ನು ಅಂತ್ಯಗೊಳಿಸುವುದಾಗಿ ಚುನಾವಣಾ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಇಬ್ಬರೂ ನಾಯಕರ ಅವಧಿಯಲ್ಲಿ ಬಿಹಾರ ನಷ್ಟ ಅನುಭವಿಸಿದೆ. ಜನ್ ಸೂರಾಜ್ ಎಲ್ಲಾ 243 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಕ್ಷವು ಸರ್ಕಾರ ರಚಿಸಿದ ಒಂದು ಗಂಟೆಯೊಳಗೆ ರಾಜ್ಯದಿಂದ ಮದ್ಯ ನಿಷೇಧವನ್ನು ತೆಗೆದುಹಾಕಲಾಗುವುದು ಎಂದು ಹೇಳಿ ಪ್ರಶಾಂತ್ ಕಿಶೋರ್ ಸಂಚಲನ ಸೃಷ್ಟಿಸಿದ್ದಾರೆ.