ಸೋಷಿಯಲ್ ಮೀಡಿಯಾದಲ್ಲಿ ಜನರು ತಮ್ಮ ಪ್ರತಿಭೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಫಾಲೋರ್ಸ್ಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಇಂತಹ ರೀಲ್ಸ್ ಹುಚ್ಚು ಕೆಲವೊಂದು ಬಾರಿ ಅಪಾಯವನ್ನು ತಂದುದೊಡ್ಡಬಹುದು. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡ ರೀಲ್ಸ್ ಮಾಡಬೇಡ ಎಂದು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರ ಮೂಲದ ಜಿತೇಂದ್ರ ಮತ್ತು ತಮನ್ನಾ ಪರ್ವೀನ್ ಎಂಬ ದಂಪತಿ ಪ್ರೇಮ ವಿವಾಹವಾಗಿದ್ದರು. ಮದುವೆಯಾದ ನಂತರ ತಮನ್ನಾ ತನ್ನ ಹೆಸರನ್ನು ಸೀಮಾ ಎಂದು ಬದಲಾಯಿಸಿಕೊಂಡರು. ಈ ದಂಪತಿಗೆ ಓರ್ವ ಮಗಳಿದ್ದು, ಜಿತೇಂದ್ರ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಇದಾದ ಬಳಿಕ ತಮನ್ನಾ ಸಾಮಾಜಿಕ ಜಾಲತಾಣದಲ್ಲೆ ತುಂಬಾ ಅಡಿಕ್ಟ್ ಆಗಿ ರೀಲ್ಸ್ ಮಾಡಲು ಪ್ರಾರಂಭಿಸಿದರು. ನಂತರ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದು, ಇದು ಜಿತೇಂದ್ರನನ್ನು ಆಗಾಗ ಕೆರಳಿಸಿತ್ತು.
ರೀಲ್ಸ್ನಲ್ಲಿ ಮುಳುಗಿದ್ದ ತಮನ್ನಾ ಪತಿ ಹಾಗೂ ಮಗಳ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಸದಾ ಆನ್ಲೈನ್ನಲ್ಲಿ ಮುಳುಗುತ್ತಿದ್ದ ಸೀಮಾಳ ವರ್ತನೆ ಗಂಡನಿಗೆ ಇಷ್ಟವಾಗದೇ ಆತ ಆಕ್ಷೇಪ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಹೇಳದೇ, ಕೇಳದೇ ಮಗಳನ್ನು ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಇದೀಗ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.