ಸೋಶಿಯಲ್ ಮೀಡಿಯಾದಲ್ಲಿ ಜನರು ತಮ್ಮ ನೃತ್ಯ, ನಟನೆ, ಹಾಡು ಹೀಗೆ ತಮ್ಮ ಪ್ರತಿಭೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ತಮ್ಮ ಫಾಲೋರ್ಸ್ಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ಉತ್ತರ ಪತ್ರಿಕೆ ಕರೆಕ್ಷನ್ ಮಾಡುವ ವೇಳೆ ರೀಲ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಹಾರದ ಪಾಟ್ನಾ ಕಾಲೇಜು ಶಿಕ್ಷಕಿಯೊಬ್ಬರು ಉತ್ತರ ಪ್ರತಿಕೆಗಳನ್ನು ಪರಿಶೀಲಿಸುವಾಗ ರೀಲ್ಸ್ ಮಾಡಿದ್ದಾರೆ. ಚಪ್ರಾ ಝಿಲ್ಲಾ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಶಾಲೆಯ ಚೆಂಚ್ ಮೇಲೆ ಹಲವಾರು ಉತ್ತರ ಪತ್ರಿಕೆಗಳನ್ನು ಇರಿಸಿರುವುದನ್ನು ನೋಡಬಹುದು. ಆದರೆ ಉತ್ತರ ಪತ್ರಿಕೆಯನ್ನು ನೋಡದೇ ಕರೆಕ್ಷನ್ ಮಾಡುವುದನ್ನು ಕಾಣಬಹುದು. ಉಳಿದ ಶಿಕ್ಷಕರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೆಲಸ ಮಾಡುವುದನ್ನು ಬಿಟ್ಟು ರೀಲ್ಸ್ ನಲ್ಲಿ ಮುಳುಗಿದ ಈ ಶಿಕ್ಷಕಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.