ಮದುವೆ ಖುಷಿಯಲ್ಲಿ ಹೊಡೆಯುತ್ತಿದ್ದ ಪಟಾಕಿಯಿಂದ ಮದುವೆ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ನರೇಶ್ ಪಾಸ್ವಾನ್ ಎಂಬುವವರ ಅವರ ಮಗಳ ಮದುವೆ ಇತ್ತು. ಹಾಗಾಗಿ ಬೇರೆ ಊರಿನಿಂದ ಮದುವೆಗೆ ಬಂದವರನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗಿತ್ತು. ಮೃತರಲ್ಲಿ ದಂಪತಿ, ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಮೃತರು ರಾಮಚಂದ್ರ ಪಾಸ್ವಾನ್ ಪುತ್ರ ಸುನಿಲ್ ಪಾಸ್ವಾನ್, ಪತ್ನಿ ಲಾಲಿ ದೇವಿ, ಉಮೇಶ್ ಪಾಸ್ವಾನ್ ಪತ್ನಿ ಕಾಂಚನ್ದೇವಿ ಸಾವನ್ನಪ್ಪಿದ್ದಾರೆ.
ದಂಪತಿ ಬಂದ ತಕ್ಷಣ ಪಟಾಕಿ ಸಿಡಿಸಿದ್ದಾರೆ. ಆಗ ಟೆಂಟ್ಗೆ ಬೆಂಕಿ ಹೊತ್ತಿಕೊಂಡಿತ್ತು. ಜನರು ಬಂದು ಬೆಂಕಿ ನಂದಿಸಲು ಶುರುಮಾಡಿದಾಗ ಅಲ್ಲಿದ್ದ ಸಿಲಿಂಡರ್ಗೂ ಬೆಂಕಿ ಹೊತ್ತಿಕೊಂಡಿತ್ತು. ಅಲ್ಲಿಂದ ಡೀಸೆಲ್ ಸ್ಟಾಕ್ಗೂ ಬೆಂಕಿ ತಗುಲಿ ಆರು ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರು ಎನ್ನಲಾಗಿದೆ.