ಉಪಚುನಾವಣೆ ಅಖಾಡ ರಂಗೇರಿರುವ ಈ ಹೊತ್ತಿನಲ್ಲಿ ಬಿಜೆಪಿ ತಮ್ಮ ನಾಯಕರಿಗೆ ಬಿಗ್ ಶಾಕ್ ಕೊಟ್ಟಿದೆ. ಹೌದು ಬಿಜೆಪಿಯ ಯತ್ನಾಳ್, ರಮೇಶ್ ಜಾರಕಿಹೊಳಿಗೆ ಬಿಜೆಪಿ ಬಿಗ್ ಶಾಕ್ ಕೊಟ್ಟಿದೆ. ವಿಜಯೇಂದ್ರ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಹಾಗು ಅವರಿಗೆ ಸದಾ ಸಾಥ್ ನೀಡುತ್ತಿದ್ದ ರಮೇಶ್ ಜಾರಕಿಹೊಳಿಗೆ ಪಕ್ಷ ವಿರೋಧಿಗಳೆಂದು ಬಿಜೆಪಿ ಹೈಕಮಾಂಡ್ ತಿಳಿದಂತೆ ಕಂಡಿದೆ.
ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯತ್ನಾಳ್, ಜಾರಕಿಹೊಳಿ ಹೆಸರನ್ನ ಕೈಬಿಡಲಾಗಿದೆ. 40 ಜನರ ಪಟ್ಟಿಯನ್ನ ಆಯೋಗಕ್ಕೆ ನೀಡಿರುವ ಬಿಜೆಪಿ ಪಟ್ಟಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಲ್ಲ, ರಮೇಶ್ ಜಾರಕಿಹೊಳಿ, ಅರವಿಂದ ಬೆಲ್ಲದ್ ಹೆಸರೂ ಇಲ್ಲ, ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರೂ ಇಲ್ಲ.
ಇದನ್ನೂ ಓದಿ: ಐಪಿಎಲ್ 5 ತಂಡಗಳ ಕ್ಯಾಪ್ಟನ್ ಚೇಂಜ್..!
ಭಿನ್ನಮತೀಯರಿಗೆ ಚುರುಕು ಮುಟ್ಟಿಸುತ್ತಾ ಬಿಜೆಪಿ ಹೈಕಮಾಂಡ್ ಮಾಡುತ್ತಿದ್ಯಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆತಾಗುತ್ತಿದೆ. ಇದರೊಂದಿಗೆ ಬಿಜೆಪಿ ವಲಯದಲ್ಲಿ ಭಿನ್ನ ಸಭೆ, ಭಿನ್ನ ಮಾತಿಗೆ ಹೈಕಮಾಂಡ್ ಸಿಟ್ಟಾಗಿದೆಯಾ ಎಂಬ ಚರ್ಚೆಯೂ ನಡೆಯುತ್ತಿದೆ. ಬೈ ಎಲೆಕ್ಷನ್ ಬಳಿಕ ಮತ್ತಷ್ಟು ಕ್ರಮ ಕೈಗೊಳ್ಳುತ್ತಾ ಬಿಜೆಪಿ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ರೋಹಿತ್ ಬಾಲ್ ಇನ್ನಿಲ್ಲ!