ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ತಮ್ಮ ಮಗನಾದ ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಲು ಚುನಾವಣೆಗೆ ₹100 ಕೋಟಿ ಖರ್ಚು ಮಾಡಿದ್ದಾರೆ. ಅಷ್ಟು ಹಣ ಖರ್ಚು ಮಾಡಲು ಎಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ’ ಎಂದು ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇಕಡ 60 ರಷ್ಟು ಲಂಚದ ಆರೋಪ ಮಾಡಿದ್ದಾರೆ. ಅದಕ್ಕೂ ಮೊದಲು ₹100 ಕೋಟಿ ಖರ್ಚು ಮಾಡಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಆದ್ದರಿಂದ, ಜನರಿಗೆ ವಿವರಣೆ ಕೊಡಲಿ’ ಎಂದರು.
‘ನಾನು ಕೂಡ ಚನ್ನಪಟ್ಟಣದವನೇ. ಮೊದಲೆಲ್ಲ ಚುನಾವಣೆ ಸಮಯದಲ್ಲಿ ಹತ್ತು ರೂಪಾಯಿ ಖರ್ಚು ಮಾಡದ ಕುಮಾರಸ್ವಾಮಿ ಈಗ ಅಷ್ಟು ಹಣ ಖರ್ಚು ಮಾಡಲು ಎಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ. ಅವರೇನು ಆಲೂಗಡ್ಡೆ ಮಾರಿ ಅಷ್ಟು ಹಣ ಸಂಪಾದಿಸಿದ್ಧಾರಾ’ ಎಂದು ಅವರು ತಮ್ಮ ಮಿತ್ರ ಪಕ್ಷ ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಎಸ್ ಟಿ ಸೋಮಶೇಖರ್ ಅವರು ಯಶವಂತಪುರದ ಬಿಜೆಪಿ ಶಾಸಕ. ಇವರು ಬಿಜೆಪಿ ಗಿಂತಲೂ ಹೆಚ್ಚು ಕಾಂಗ್ರೆಸ್ ಪರವಾಗಿಯೇ ಮಾತನಾಡುತ್ತಾರೆ. ಸ್ವಪಕ್ಷವಾದ ಬಿಜೆಪಿ ವಿರುದ್ದ ಟೀಕಿಸುತ್ತಲೇ ಬಂದಿದ್ದಾರೆ. ಇದೀಗ ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದ ಬೈಎಲೆಕ್ಷನ್ನಲ್ಲಿ ಕುಮಾರಸ್ವಾಮಿ ಅವರು ತಮ್ಮ ಮಗನಾದ ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಲು ಹಣದ ಹೊಳೆಯನ್ನೇ ಹರಿಸಿದ್ದಾರೆ. ಸುಮಾರು 100 ಕೋಟಿ ರುಪಾಯಿಯಷ್ಟು ಹಣ ಕರ್ಚು ಮಾಡಿದ್ದಾರೆ ಎಂದು ವಿಧಾನಸೌಧದಲ್ಲಿಯೇ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್ ನಲ್ಲಿ ಯಾವುದೇ ರೀತಿಯಾದ ಪ್ರತಿಕ್ರಿಯೆ ಬಂದಿಲ್ಲ. ಆದರೇ ಮಿತ್ರ ಪಕ್ಷದ ವಿರುದ್ದ ವೇ ಇಂತಹ ಆರೋಪ ಮಾಡುವುದು ಬಿಜೆಪಿ ಪಾಳಯದಲ್ಲಿ ಮುಜುಗರಕ್ಕೇ ಈಡಾಗಿದೆ.