ರಾಜ್ಯದಲ್ಲಿ ಬಿಜೆಪಿ ಬಣ ಬಡಿದಾಟ ತಾರಕಕ್ಕೇರುತ್ತಿದೆ. ಬಿಜೆಪಿಯ ರೆಬೆಲ್ ಶಾಸಕ ಯತ್ನಾಳ್ ತಮ್ಮ ಹಳೆ ವರಸೆ ಮುಂದಿವರೆಸಿದ್ದಾರೆ. ಸ್ವಪಕ್ಷದವರ ವಿರುದ್ದವೇ ಮಾತನಾಡುವ ಚಾಳಿ ಮುಂದುವರೆಸಿದ್ದಾರೆ. ಬಿಜೆಪಿಯಲ್ಲಿ ಜಗಭಂಡ ಬಸನಗೌಡ ಪಾಟೀಲ್ ಯತ್ನಾಳ್ ಎಂಬುದನ್ನ ಪದೇ ಪದೇ ನಿರೂಪಿಸುತ್ತಿದ್ದಾರೆ. ಬುದ್ಧಿವಾದ ಹೇಳಿದ್ರೂ ‘ಕಿರಿಕ್ ಪಾರ್ಟಿ’ ಯತ್ನಾಳ್ ಕಿರಿಕಿರಿ ಕಂಟಿನ್ಯೂ ಮಾಡ್ತಿದ್ದಾರೆ. ಹೈಕಮಾಂಡ್ ಎಚ್ಚರಿಕೆಗೂ ಯತ್ನಾಳ್ ಡೋಂಟ್ ಕೇರ್ ಅನ್ನೂ ತರ ವರ್ತಿಸುತ್ತಿದ್ದಾರೆ. ಇದು ಬಿಜೆಪಿ ಪಾರ್ಟಿಗೆ ಕಿರಿಕಿರಿ ಉಂಟಿ ಮಾಡುತ್ತಿದೆ.
ಇತ್ತೀಚೆಗೆ ಬಿಜೆಪಿ ಹೈಕಮಾಂಡ್ ನಾಯಕರು ಯತ್ನಾಳ್ರನ್ನ ದೆಹಲಿಗೆ ಕರೆದು ಸಮಾಧಾನ ಮಾಡಿದ್ರೂ ಸಹ ಉಪಯೋಗವಿಲ್ಲ.‘ಸಂಘ’ದ ನಾಯಕರ ಮಾತನ್ನೂ ಸಹ ರೆಬೆಲ್ ಶಾಸಕ ಯತ್ನಾಳ್ ಕೇಳುತ್ತಿಲ್ಲ. ದೆಹಲಿಗೆ ಕರೆದು ವರಿಷ್ಠರು ಕಿವಿ ಹಿಂಡಿದ್ರೂ ಯತ್ನಾಳ್ ಮೊಂಡುತನ ಮುಂದುವರೆಸಿದ್ದಾರೆ. ವಿಜಯೇಂದ್ರ ವಿರುದ್ಧ ರೆಬೆಲ್ ಮಸಲತ್ತು ಮುಂದುವರೆದಿದೆ. ಪಂಚಮಸಾಲಿ ಹೋರಾಟದ ವೇಳೆಯೂ ಯತ್ನಾಳ್ ಕಿತಾಪತಿ ಮಾಡಿದ್ದಾರೆ.
ವಿಜಯೇಂದ್ರ ಭಾಷಣಕ್ಕೆ ಯತ್ನಾಳ್ ಬೆಂಬಲಿಗರು ಅಡ್ಡಿಪಡಿಸಿದ ಘಟನೆ ನೆನ್ನೆ ಬೆಳಗಾವಿಯಲ್ಲಿ ನಡೆದಿದೆ. ರಾಜ್ಯಾಧ್ಯಕ್ಷರ ಬದಲಾವಣೆಗೆ ಶಾಸಕ ಯತ್ನಾಳ್ ಬಿಗಿ ಪಟ್ಟು ಹಿಡಿದಿದ್ದಾರೆ. ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿಲ್ಲ. ಬಿ.ವೈ. ವಿಜಯೇಂದ್ರ ವಿರುದ್ಧ ಯತ್ನಾಳ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಅಧಿವೇಶನದ ಸಂದರ್ಭದಲ್ಲೇ ಬಿಜೆಪಿಗೆ ಯತ್ನಾಳ್ ಮುಜುಗರ ಉಂಟುಮಾಡಿದ್ದಾರೆ. ಕೇಸರಿ ಪಡೆಗೆ ಯತ್ನಾಳ್ ರಿಂದ ಡ್ಯಾಮೇಜ್ ಮೇಲೆ ಡ್ಯಾಮೇಜ್ ಆಗುತ್ತಿದೆ.