ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮದ ಹಿನ್ನೆಲೆ, ಅಸಾಧ್ಯವಾದುದ್ದನ್ನು ಸಾಧಿಸಿದ್ದೇವೆ ಎಂದಿರೋ ಡಿ.ಕೆ ಶಿವಕುಮಾರ್ಗೆ ಟ್ವೀಟ್ ಮೂಲಕ ಬಿಜೆಪಿ ಕೌಂಟರ್ ಕೊಟ್ಟಿದೆ.
ಪೇಸ್ಭುಕ್ ಮತ್ತು ಟ್ವೀಟರ್ ನಲ್ಲಿ ಬಿಜೆಪಿ, ಹೌದು ಡಿ.ಕೆ. ಶಿವಕುಮಾರ್ ಸಾಹೇಬರೇ, ನೀವು ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡಿ ತೋರಿಸಿದ್ದೀರಿ. ಕೇವಲ 4 ತಿಂಗಳಲ್ಲೇ ಬರೊಬ್ಬರಿ 430 ಕೊಲೆಗಳು, ರಾಜ್ಯದಲ್ಲಿ ಸುಮಾರು 22 ಸಾವಿರ ಸುಲಿಗೆ, ಹಲ್ಲೆ, ಅತ್ಯಾಚಾರ, ಗಲಭೆ ಪ್ರಕರಣಗಳು ದಾಖಲಾಗಿವೆ. ಇದು ಆ ದಿನಗಳ ಗೂಂಡಾ ಕೊತ್ವಾಲ್ ಕಂಡ ಕನಸನ್ನು ಈ ದಿನಗಳ ಕನಕಪುರದ ಬಂಡೆ ಒಂದು ವರ್ಷದಲ್ಲಿ ಸಾಧಿಸಿ ತೋರಿಸಿದ್ದಾರೆ. ಕೊತ್ವಾಲ್ ಪ್ರಾಯೋಜಕತ್ವದಲ್ಲಿ ಒಂದು ವರ್ಷದ ಮ್ಯಾನ್ ಆಫ್ ದಿ ಮ್ಯಾಚ್ ಕೆಂಪು ಕ್ಯಾಪ್ ನಿಮ್ಮ ಮುಡಿಗೆ ಸೇರಿದೆ ಎಂದು ಟೀಕೆ ಮಾಡಿದೆ.