ರಾಜ್ಯದಲ್ಲಿ ಬಿಜೆಪಿ ಬಣ ಬಡಿದಾಟ ತಾರಕಕ್ಕೇರಿದೆ. ರೆಬಲ್ ಶಾಸಕ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಮನಸ್ಥಾಪ ಹೆಚ್ಚಾಗಿದೆ. ಹೀಗಾಗಿ ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಬಿಜೆಪಿಯಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ ಎಸ್.ಟಿ ಎಸ್, ಶಿವರಾಂ ಹೆಬ್ಬಾರ್ ಅವರ ಸ್ಫೋಟಕ ಮಾತು. ಪಕ್ಷ ವಿರೋಧಿಗಳ ಹೇಳಿಕೆಯಿಂದ ಬಿಜೆಪಿ ಹೈಕಮಾಂಡ್ ಫುಲ್ ಅಲರ್ಟ್ ಆಗಿದೆ. ಶಿಸ್ತು ಕ್ರಮದ ಅಸ್ತ್ರ ಪ್ರಯೋಗಿಸಿದ್ದರೂ ಸಹ ಬಿಜೆಪಿಗೆ ರೆಬಲ್ಸ್ ಟೀಂ ಶಾಕ್ ಕೊಟ್ಟದೆ.
ಕೆಲವು ದಿನಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ಶಾಸಕರು ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಅವರ ಹೇಳಿಕೆಗೆ ಪುಷ್ಠಿ ನೀಡಿದ್ದರು ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರ ಆಪರೇಷನ್ ಮಾತು. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಮತ್ತಷ್ಟು ಟೆನ್ಷನ್ ಹೆಚ್ಚಾಗಿದೆ.
ಚನ್ನಪಟ್ಟಣ ಬೈಎಲೆಕ್ಷನ್ ವೇಳೆ ಬಿಜೆಪಿಯಲ್ಲಿದ್ದ ಯೋಗೇಶ್ವರ್ ಅವರನ್ನ ಆಪರೇಷನ್ ಮಾಡಿದ್ದರು ಡಿ.ಕೆ ಬ್ರದರ್ಸ್. ಆಪರೇಷನ್ ಮಾಸ್ಟರ್ ಮೈಂಡ್ ಯೋಗೇಶ್ವರ್ ಸಹ ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹೀಗಾಗಿ ಎಸ್.ಟಿ ಎಸ್ ಹಾಗೂ ಶಿವರಾಂ ಹೆಬ್ಬಾರ್ ಹೇಳಿಕೆಯಿಂದ ಬಿಜೆಪಿ ಅಲರ್ಟ್ ಆಗಿದೆ. ಒಂದೆಡೆ ಬಣ ರಾಜಕೀಯದಿಂದ ಪಕ್ಷದ ವಿರುದ್ಧ ಬಿಜೆಪಿ ನಾಯಕರು ಬೇಸತ್ತಿದ್ದಾರೆ. ಮತ್ತೊಂದಡೆ ಕ್ಷೇತ್ರಕ್ಕೆ ಅನುದಾನ ಸಿಗದೇ ಬಿಜೆಪಿ ಶಾಸಕರು ಕಂಗಾಲಾಗಿದ್ದಾರೆ. ಅಂತಹ ಶಾಸಕರನ್ನ ಕಾಂಗ್ರೆಸ್ ಸೆಳೆಯುವ ಪ್ರಯತ್ನ ಮಾಡುತ್ತಿದ್ಯಾ ಎಂಬ ಆತಂಕದಲ್ಲಿ ಕಮಲ ಪಡೆ ಇದೆ. ಹಿಗಾಗಿ ಪಕ್ಷ ವಿರೋಧಿಗಳ ಹೇಳಿಕೆಯಿಂದ ಬಿಜೆಪಿ ಹೈಕಮಾಂಡ್ ಮತ್ತಷ್ಟು ಅಲರ್ಟ್ ಆಗಿದೆ.