ಬಾಲಿವುಡ್ ನಟ ಪರ್ವಿನ್ ದಾಬಸ್ ಅವರ ಕಾರು ಇಂದು ಬೆಳಗ್ಗೆ ಅಪಘಾತಕ್ಕೀಡಾಗಿರುವುದಾಗಿ ಮೂಲಗಳು ತಿಳಿಸಿವೆ. ಅಪಘಾತದಲ್ಲಿ ನಟ ಗಂಭೀರ ಗಾಯಗೊಂಡಿದ್ದು ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯಲ್ಲಿ ಪತ್ನಿ ಪ್ರೀತಿ ಜಾಂಗಿಯಾನಿ ಜೊತೆಗಿದ್ದಾರೆ ಎಂದು ಹೇಳಲಾಗಿದೆ.
ನಟ ಪರ್ವಿನ್ ದಬಾಸ್ ಪ್ರೊ ಪಂಜಾ ಲೀಗ್ನ ಸಹ ಸಂಸ್ಥಾಪಕರಾಗಿದ್ದಾರೆ. ಕಾರು ಅಪಘಾತದ ಬಗ್ಗೆ ಪ್ರೊ ಪಂಜಾ ಲೀಗ್ ಸ್ವತಃ ಮಾಹಿತಿಯನ್ನು X ನಲ್ಲಿ ಹಂಚಿಕೊಂಡಿದ್ದು “ಪ್ರೊ ಪಂಜಾ ಲೀಗ್ ಸಹ ಸಂಸ್ಥಾಪಕ ಪರ್ವಿನ್ ದಾಬಾಸ್ ಅವರು ಶನಿವಾರ ಬೆಳಿಗ್ಗೆ ಕಾರು ಅಪಘಾತಕ್ಕೊಳಗಾಗಿದ್ದು ಅವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆ, ಬಾಂದ್ರಾ, ಐಸಿಯುಗೆ ದಾಖಲಿಸಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ ಎಂದು ಪೋಸ್ಟ್ ಹಾಕಿದ್ದಾರೆ.