ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈನ “ಅಟಲ್ ಸೇತು” ಸೇತುವೆ ಬಗ್ಗೆ ಮಾತನಾಡಿದ್ದು, ಈ ಸೇತುವೆಯನ್ನ ಜನವರಿಯಲ್ಲಿ ಪ್ರಧಾನಿ ಮೋದಿಯವರು ಉದ್ಘಾಟಿಸಿದರು. ಇದು ಸಾರ್ವಜನಿಕರಿಗೆ ಮುಕ್ತವಾಗಿದೆ. ಹಾಗೆಯೇ ಇದನ್ನು ಬಳಸಿದರು ಮುಂಬೈ ಟ್ರಾಫಿಕ್ ಕಿರಿಕಿರಿಗೆ ಇದು ವರದಾನವಾಗಿದೆ ಎಂದರು.
ಭಾರತದ ಅತಿದೊಡ್ಡ ಸಮುದ್ರ ಸಂಪರ್ಕ ಸೇತುವೆಯಾದ “ಅಟಲ್ ಸೇತು” 22 ಕಿಲೋಮೀಟರ್ ಸೇತುವೆಯಾಗಿದ್ದು, ಮುಂಬೈಯನ್ನು ಅದರ ಉಪ ನಗರವಾದ ನವಿ ಮುಂಬೈನೊಂದಿಗೆ ಸಂಪರ್ಕಿಸುತ್ತದೆ. ಈ ಸೇತುವೆ ಪ್ರಯಾಣಕ್ಕೆ ಗೇಮ್ ಚೇಂಜರ್ ಎಂದು ಹೇಳಿದರು. ಎರಡು ಗಂಟೆಗಳ ಪ್ರಯಾಣವನ್ನು ಈಗ ಕೇವಲ 20 ನಿಮಿಷಕ್ಕೆ ಇಳಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಮೋದಿಯವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು ಮತ್ತು ಎಲ್ಲವೂ ಅದ್ಭುತವಾಗಿದೆ ಎಂದು ಹೇಳಿದರು.