ಸ್ಯಾಂಡಲ್ವುಡ್ ನಾಯಕಿ ಶ್ರೀಲೀಲಾ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಜೊತೆ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಅವರು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಮ್ಯಾಡಾಕ್ ಫಿಲ್ಫ್ ಕಚೇರಿ ಮುಂದೆ ಮಾಧ್ಯಮಗಳಿಗೆ ಫೋಸ್ ನೀಡಿದ್ದಾರೆ.ಆ ಮೂಲಕ ಇವರಿಬ್ಬರ ಕಾಂಬಿನೇಷನ್ ಸದ್ಯದಲ್ಲೇ ತೆರೆಗೆ ಬರಲಿದೆ ಎಂಬ ಸುದ್ದಿಗಳು ಬಿಟೌನ್ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಅಮೆರಿಕಾದಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಬೆಳೆದು, ಸ್ಯಾಂಡಲ್ ವುಡ್ ನಿಂದಲೇ ಬಣ್ಣದಲೋಕಕ್ಕೆ ಪದಾರ್ಪಣೆ ಮಾಡಿದಂತಹ ಅಪ್ಪಟ ಕನ್ನಡತಿ, ಕ್ಯೂಟ್ ಕ್ವೀನ್ ಅಂದ್ರೆ ಅದು ಶ್ರೀಲೀಲಾ. ಯೆಸ್.. ಕಿಸ್ ಚಿತ್ರದ ಮೂಲಕ ಗ್ಲಾಮರ್ ದುನಿಯಾಗೆ ಬಂದ ಶ್ರೀಲೀಲಾ, ಅದಕ್ಕೂ ಮುನ್ನ ಚಿತ್ರಾಂಗದ ಸಿನಿಮಾ ಮೂಲಕ ಚೈಲ್ಡ್ ಆರ್ಟಿಸ್ಟ್ ಆಗಿ ಬಣ್ಣ ಹಚ್ಚಿದ್ದರು. ಶ್ರೀಮುರಳಿ ಜೊತೆ ಭರಾಟೆ ಚಿತ್ರ ಮಾಡಿ, ಟಾಲಿವುಡ್ ನತ್ತ ಮರಳಿದ ಕ್ಯೂಟ್ ಕ್ವೀನ್, ತನ್ನ ನಟನಾ ಗಮ್ಮತ್ತು, ಡ್ಯಾನ್ಸ್ ಗೈರತ್ತು, ಗ್ಲಾಮರ್ ಝಲಕ್ ಗಳಿಂದ ತೆಲುಗು ಮಂದಿಯ ದಿಲ್ ದೋಚಿದರು. ಬಾಲಕೃಷ್ಣ, ರಾಮ್ ಪೋತಿನೇನಿ, ರವಿತೇಜಾ, ಪ್ರಿನ್ಸ್ ಮಹೇಶ್ ಬಾಬು, ನಿತಿನ್, ಅಲ್ಲು ಅರ್ಜುನ್.. ಹೀಗೆ ಸಾಲು ಸಾಲು ಬಿಗ್ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡರು. ಅದ್ರಲ್ಲೂ ಪುಷ್ಪ-2 ಚಿತ್ರದ ಕಿಸಿಕ್ ಸಾಂಗ್ ನಿಂದ ಕ್ಯೂಟ್ ಕ್ವೀನ್ ಕಿಸಿಕ್ ಕ್ವೀನ್ ಆಗಿ ಬದಲಾಗಿದ್ದಾರೆ.
ಸದ್ಯ ಹೊಚ್ಚ ಹೊಸ ಸುದ್ದಿ ಏನಪ್ಪಾಂದ್ರೆ ಈಕೆಯ ನೆರಳು ಬಾಲಿವುಡ್ ಅಂಗಳದಲ್ಲಿ ಕಾಣತೊಡಗಿದೆ. ಹೌದು.. ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಕನ್ನಡತಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಒಂದಷ್ಟು ಮಂದಿ ಅವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಅದರ ಸ್ಕ್ರಿಪ್ಟ್ ಕೇಳೋ ವಿಚಾರ ಒಟ್ಟಿಗೆ ಪಾಪರಾಜೀಸ್ ಕ್ಯಾಮೆರಾಗಳಿಗೆ ಸಿಕ್ಕಿದ್ದಾರೆ ಎನ್ನಲಾಗ್ತಿದೆ. ಆದ್ರೆ ಸೈಫ್ ಅಲಿ ಖಾನ್ ಮಗನ ಜೊತೆ ಶ್ರೀಲೀಲಾ ಡೇಟ್ ಮಾಡ್ತಿದ್ದಾರೆ ಅನ್ನೋದು ಕೂಡ ಒಂದು ಮೂಲದ ಮಾಹಿತಿ. ಅದೇನೇ ಇರಲಿ, ನಮ್ ಕನ್ನಡದ ಕ್ಯೂಟ್ ಕ್ವೀನ್ ಬಾಲಿವುಡ್ ಗೆ ಅಫಿಶಿಯಲಿ ಎಂಟ್ರಿ ಕೊಡೋದು ಮಾತ್ರ ಪಕ್ಕಾ ಅನ್ನೋದು ಕನ್ಫರ್ಮ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್