ಬಾಕ್ಸಿಂಗ್ ಸಾಮ್ರಾಜ್ಯದಲ್ಲಿ ಮೈಕ್ ಟೈಸನ್ ಅಂದ್ರೆ ಎದುರಾಳಿಗಳು ಬೆಚ್ಚಿ ಬೀಳ್ತಾರೆ. ರಿಂಗ್ನಲ್ಲಿ ಮೈಕ್ ಟೈಸನ್ ವಿರುದ್ಧ ಗೆದ್ದು ತೊಡೆ ತಟ್ಟಿವವರು ಯಾರು ಇಲ್ಲ. ಆದರೆ 20 ವರ್ಷಗಳ ಬಳಿಕ ಮತ್ತೆ ಬಾಕ್ಸಿಂಗ್ ರಿಂಗ್ ಬಂದ ಮೈಕ್ ಟೈಸನ್ಗೆ ಸೋಲು ಆಘಾತ ನೀಡಿದೆ. ಹೌದು, 58 ವರ್ಷದ ಮೈಕ್ ಟೈಸನ್ ವಿರುದ್ಧ ತೊಡೆ ತಟ್ಟಿದ್ದ ಜೇಕ್ ಪಾಲ್ ಗೆದ್ದು ಬೀಗಿದ್ದಾರೆ. ಇಬ್ಬರ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿತ್ತು. ಮೈಕ್ ಟೈಸನ್ ಅವರನ್ನು ಜೇಕ್ ಪಾಲ್ ಸರ್ವಾನುಮತದ ನಿರ್ಧಾರದ ಮೂಲಕ ಸೋಲಿಸಿದ್ದಾರೆ.
8 ರೌಂಡ್ಗಳಲ್ಲಿ ಈ ಬಾಕ್ಸಿಂಗ್ ಪಂದ್ಯ ನಡೆದಿದೆ. ಕೊನೆಯದಾಗಿ ಮೈಕ್ ಟೈಸನ್ ಸೋಲೊಪ್ಪಿಕೊಂಡಿದ್ದಾರೆ. 79-73 ಅಂಕಗಳನ್ನು ಇಬ್ಬರು ಪಡೆದಿದ್ದಾರೆ. ಕೂದಲೆಳೆ ಅಂತರದಲ್ಲಿ ಟೈಸನ್ ಸೋತಿದ್ದಾರೆ. 58 ವರ್ಷದ ಮೈಕ್ ಟೈಸನ್ ನಿಧಾನಗತಿ ಆಟದಿಂದ ಬಾಕ್ಸರ್ ಜೇಕ್ ಪೌಲ್ ಗೆದ್ದಿದ್ದಾರೆ. ಮೊದಲ ಎರಡು ಸುತ್ತಿನಲ್ಲಿ ಟೈಸನ್ ಟಫ್ ಫೈಟ್ ಕೊಟ್ಟರೂ ಆದರೆ ಕೊನೆಗೆ ಜೇಕ್ ಪಾಲ್ ಗೆದ್ದಿದ್ದಾರೆ. ಪಂದ್ಯದ ಮುಕ್ತಾಯದ ನಿಮಿಷಗಳಲ್ಲಿ ಜೇಕ್ ಪಾಲ್ ಮೈಕ್ ಟೈಸನ್ಗೆ ನಮಸ್ಕರಿಸಿದರು. ಇಬ್ಬರ ವಯಸ್ಸಿನ ಅಂತರವನ್ನು ಕೇಳಿದರೆ ಅಭಿಮಾನಿಗಳು ಅಚ್ಚರಿಯಾಗುವುದು ಸತ್ಯ, ಇಬ್ಬರ ವಯಸ್ಸಿನ ಅಂತರ ಬರೋಬ್ಬರೀ 31 ವರ್ಷ.