ಬೆಂಗಳೂರಿನ ಬನಶಂಕರಿ 6ನೇ ಹಂತದ ನಗರದಲ್ಲಿ ಮತ್ತೆ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಓಡಾಡುತ್ತಿರುವುದನ್ನು ಕಂಡಿರುವ ಜನರು ಆತಂಕದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೂರು ತಿಂಗಳಿನಿಂದ 10ಕ್ಕೂ ಹೆಚ್ಚು ನಾಯಿ , ಕುರಿ , ಮೇಕೆಗಳನ್ನು ಹೊತ್ತೊಯ್ದು ಚಿರತೆ ತಿಂದಿರುವುದಾಗಿ ಹೇಳಲಾಗುತ್ತಿದೆ.ಚಿರತೆಗಳು ಬೀದಿ ನಾಯಿಗಳನ್ನು ಬೇಟೆಯಾಡಲು ಚಲಿಸುತ್ತಿರಬಹುದು ಅಥವಾ ಹೆಣ್ಣು ತನ್ನ ಮರಿಗಳಿಗೆ ಸುರಕ್ಷಿತ ಸ್ಥಳ ಮತ್ತು ಆಹಾರವನ್ನು ಹುಡುಕುತ್ತಿರಬಹುದು.ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದರೆ ಮತ್ತು ಕಾಡು ಪ್ರದೇಶವನ್ನು ಅಡೆತಡೆಯಿಲ್ಲದೆ ಬಿಟ್ಟರೆ, ಪ್ರಾಣಿಗಳು ಕಾಡಿಗೆ ಮರಳುತ್ತವೆ. ನಾವು ಸ್ಥಳೀಯರು ಮತ್ತು ಪುರಸಭೆಯ ಪ್ರದೇಶವನ್ನು ಕಸ ಮುಕ್ತವಾಗಿ ಮಾಡುವಂತೆ ವಿನಂತಿಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ನೂ ಬನಶಂಕರಿ 6ನೇ ಹಂತದಲ್ಲಿ ತಾಯಿ ಮತ್ತು ಮರಿ ಚಿರತೆ ಕಂಡಿರುವಂತ ಜನರು ಸಂಜೆ ಹಾಗೂ ಬೆಳಗಿನ ವೇಳೆಯಲ್ಲಿ ಮನೆಯಿಂದ ಹೊರ ಬಾರದಂತೆ ಭಯದಿಂದ ಬದುಕುತ್ತಿದ್ದಾರೆ . ಇನ್ನೂ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ಹಾಗೂ ಕಳಿಸೋದಕ್ಕೂ ಯೋಚಿಸುವಂತ ಪರಿಸ್ಥಿತಿ ಉಂಟಾಗಿದೆ.
ಈ ಹಿಂದೆ ಇದೇ ನಗರದಲ್ಲಿ ಚಿರತೆಯೊಂದು ಬಿಎಂಟಿಸಿ ಬಸ್ ಚಾಲಕನ ಮೇಲೆ ದಾಳಿ ಮಾಡಿರುವ ಸಂಗತಿಯು ಇದೆ. ಈಗ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಉಂಟಾಗಿದೆ. ಈ ಕೂಡಲೇ ಅರಣ್ಯ ಇಲಾಖೆಯವರು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿಯೂ ಚಿರತೆ ಪ್ರತ್ಯಕ್ಷವಾಗಿತ್ತು . ಈ ಹಿಂದೆ ಕಂಬಾಳು ಗೊಲ್ಲರಹಟ್ಟಿ ಬಳಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದವು. ಮೂರು ಚಿರತೆಗಳನ್ನು ಸೆರೆ ಹಿಡಿದು ಅರಣ್ಯ ಅಧಿಕಾರಿಗಳು ಬನ್ನೆರುಘಟ್ಟ ಉದ್ಯಾನವನಕ್ಕೆ ಬಿಟ್ಟಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಕಂಬಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಕರೆಮ್ಮ ಎನ್ನುವ ಮಹಿಳೆಯನ್ನು ಚಿರತೆ ಬಲಿ ಪಡೆದಿತ್ತು. ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಅರಣ್ಯ ಇಲಾಖೆ 2 ಚಿರತೆಗಳನ್ನು ಸೆರೆ ಹಿಡಿದಿತ್ತು. ಈ ಬೆನ್ನಲ್ಲೇ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.