ಬ್ರಿಟನ್: ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಮಾಂಸ, ಮದ್ಯ ಕಂಡು ಬ್ರಿಟಿಷ್ ಹಿಂದೂಗಳು ಶಾಕ್ ಆಗಿದ್ದಾರೆ. ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ, ಸಮುದಾಯದ ಮುಖಂಡರು ಮತ್ತು ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. ದೀಪಾಲಂಕಾರದ ದೀಪಗಳು, ಕೂಚಿಪುಡಿ ನೃತ್ಯ ಪ್ರದರ್ಶನ ಮತ್ತು ಸ್ಟಾರ್ಮರ್ ಅವರ ಭಾಷಣವನ್ನು ಸಮಾರಂಭ ಒಳಗೊಂಡಿತ್ತು.
ಇದನ್ನು ಓದಿ: ದೆಹಲಿ, ಹರಿಯಾಣದಲ್ಲಿ ಗಾಳಿಯ ಗುಣಮಟ್ಟ ಮತ್ತೆ ಕಳಪೆ!
ಕೆಲವರು ಬ್ರಿಟಿಷ್ ಹಿಂದೂಗಳು, ಊಟದ ಮೆನುವಿನಲ್ಲಿ ಮದ್ಯ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುವುದನ್ನು ಕಂಡು ಆಘಾತ ವ್ಯಕ್ತಪಡಿಸಿದರು. ಅತಿಥಿಗಳಿಗೆ ಲ್ಯಾಂಬ್ ಕಬಾಬ್, ಬಿಯರ್ ಮತ್ತು ವೈನ್ ಅನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್ಕೌಂಟರ್; ಇಬ್ಬರು ಭಯೋತ್ಪಾದಕರ ಹತ್ಯೆ!
ಕಳೆದ ವರ್ಷ ರಿಷಿ ಸುನಕ್ ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಊಟದ ಮೆನುವಿನಲ್ಲಿ ಮಾಂಸ ಮತ್ತು ಮದ್ಯ ಇರಲಿಲ್ಲ. ಪ್ರಮುಖ ಬ್ರಿಟಿಷ್ ಹಿಂದೂ ಪಂಡಿತರಾದ ಸತೀಶ್ ಕೆ ಶರ್ಮಾ ಅವರು, ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಂವೇದನಾಶೀಲತೆ ಕೊರತೆ ಎದ್ದು ಕಂಡಿದೆ ಎಂದು ಆರೋಪಿಸಿದ್ದಾರೆ.