ಚಿನ್ನ-ಬೆಳ್ಳಿ ಮೇಲಿನ ಸುಂಕದ ದರ ಕಡಿತ ಘೋಷಣೆ ಬೆನ್ನಲ್ಲೇ 3ನೇ ದಿನವೂ ಅವುಗಳ ಬೆಲೆ ಇಳಿಕೆಯಾಗಿದ್ದು, ಒಟ್ಟಾರೆ 3 ದಿನದಲ್ಲಿ 5 ಸಾವಿರ ರುಪಾಯಿಯಷ್ಟು ಕುಸಿದಿದೆ. ಈ ಪೈಕಿ ಗುರುವಾರ ಒಂದೇ ದಿನ ಚಿನ್ನದ ಬೆಲೆ 1000 ರುಪಾಯಿ ಹಾಗೂ ಬೆಳ್ಳಿ ಬೆಲೆ 3700 ರುಪಾಯಿ ಇಳಿದಿದೆ. ಬುಧವಾರ ದೆಹಲಿಯಲ್ಲಿ 71,650 ರು ಇದ್ದ 10 ಗ್ರಾಂ ಚಿನ್ನದ ಬೆಲೆ ಗುರುವಾರ 1,000 ರು. ಇಳಿಕೆಯಾಗುವ ಮೂಲಕ 70,650 ರು. ಆಗಿದೆ. ಮುಂಬೈನಲ್ಲಿ 70,860 ರುಪಾಯಿ ಇದ್ದ ಚಿನ್ನದ ಬೆಲೆ 68,227 ರುಪಾಯಿ ಆಗಿದೆ. ಇದೇ ವೇಳೆ, ಬೆಂಗಳೂರಿನಲ್ಲಿ 10 ಗ್ರಾಂಗೆ 66,050 ರುಪಾಯಿ ಇದ್ದ ಚಿನ್ನದ ದರ ಗುರುವಾರ 65120 ರುಪಾಯಿಗೆ ಇಳಿದಿದ್ದು ಒಟ್ಟು 950 ರುಪಾಯಿ ಇಳಿಕೆ ಆಗಿದೆ. ಬೆಳ್ಳಿ ಬೆಲೆ 1 ಕೆಜಿಗೆ 3700 ರುಪಾಯಿ ಇಳಿದು 83,600 ರುಪಾಯಿಗೆ ಸ್ಥಿರವಾಗಿದೆ.