ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳ ಬುಧವಾರವೂ ಮುಂದುವರಿದಿದೆ. ನಿನ್ನೆ ಅಲ್ಪ ಏರಿಕೆ ಕಂಡಿದ್ದ ಈ ಎರಡೂ ಲೋಹಗಳ ಬೆಲೆಯಲ್ಲಿ ಇಂದು ಭಾರೀ ಹೆಚ್ಚಳವಾಗಿದೆ. ಎರಡೂ ಕೂಡ ಸಾರ್ವಕಾಲಿಕ ದಾಖಲೆ ಬೆಲೆ ಮಟ್ಟಕ್ಕೆ ಏರಿವೆ. ಅಪರಂಜಿ ಚಿನ್ನದ ಬೆಲೆ 8,000 ರೂ ಗಡಿ ದಾಟಿದೆ. 18 ಕ್ಯಾರಟ್ ಚಿನ್ನದ ಬೆಲೆ 6,000 ರೂ ಗಡಿ ದಾಟಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,300 ರೂನಿಂದ 7,340 ರೂಗೆ ಏರಿದೆ. ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಅಷ್ಟು ವ್ಯತ್ಯಯವಾಗಿಲ್ಲ.
ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಹೆಚ್ಚಳ ಅಧಿಕವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 73,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 80,070 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 73,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 23ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,400 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,070 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,060 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 104 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,400 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,070 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 73,400 ರೂ
ಚೆನ್ನೈ: 73,400 ರೂ
ಮುಂಬೈ: 73,400 ರೂ
ದೆಹಲಿ: 73,550 ರೂ
ಕೋಲ್ಕತಾ: 73,400 ರೂ
ಕೇರಳ: 73,400 ರೂ
ಅಹ್ಮದಾಬಾದ್: 73,450 ರೂ
ಜೈಪುರ್: 73,550 ರೂ
ಲಕ್ನೋ: 73,550 ರೂ
ಭುವನೇಶ್ವರ್: 73,400 ರೂ