ಇಂದು ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ?
ಇಂದು ಕೃಷ್ಣ ಜನ್ಮಾಷ್ಟಮಿಯ ಶುಭದಿನ. ದೇಶದಾದ್ಯಂತ ಜನರು ಕೃಷ್ಣನ ಆಚರಣೆಯಲ್ಲಿ ಮುಳುಗಿದ್ದಾರೆ. ಈ ಶುಭದಿನದಂದು ಹಲವರು ಬಂಗಾರ ಖರೀದಿಸಲು ಮುಂದಾಗಿದ್ದಾರೆ. ಆದರೆ ನಿನ್ನೆಗಿಂತ ಇಂದು ಬಂಗಾರದ ಬೆಲೆಯನ್ನು ಗಮನಿಸಿದಾಗ ಕೊಂಚ ಇಳಿಕೆ ಕಂಡಿದೆ.
ಭಾರತೀಯರು ಚಿನ್ನ ಪ್ರಿಯರು. ಶುಭದಿನ, ಶುಭ ಘಳಿಗೆಯಲ್ಲಿ ಚಿನ್ನ ಖರೀದಿಸಲು ಮುಂದಾಗುತ್ತಾರೆ. ಅದರಂತೆಯೇ ಕೃಷ್ಣ ಜನ್ಮಾಷ್ಟಮಿಯಂದು ಚಿನ್ನ ಖರೀದಿಸೋದು ಉತ್ತಮ. ಹಾಗಾಗಿ ಇಂದು ಕೆಲವರು ಚಿನ್ನದ ಅಗಂಡಿಯಲ್ಲಿ ಬೀಡುಬಿಟ್ಟಿದ್ದಾರೆ. ಅಂದಹಾಗೆಯೇ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಿರಿ.
22 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 6,694 ಇದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 66,940 ಇದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,303 ಆಗಿದೆ.
24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 73,030 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 87.90 ಇದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 87,900 ಇದೆ.