ರಾಜ್ಯದ ಜನ ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಬಂಗಾರ ಖರೀದಿ ಮಾಡಿದ್ರೆ ಕುಟುಂಬಕ್ಕೆ ಒಳ್ಳಯದಾಗಲಿದೆ ಅನ್ನೋ ನಂಬಿಕೆ ಎಲ್ಲರದ್ದು. ಹಾಗಾಗಿ ಗೃಹಿಣಿಯರು ಗೋಲ್ಡ್ ಜ್ಯುವೆಲರಿ ಶಾಪಿಂಗ್ ಕಡೆ ಮುಖ ಮಾಡಿದ್ದಾರೆ. ಇತ್ತೀಚಿಗೆ ಚಿನ್ನದ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಭಾರೀ ನಿರಾಸೆ ಮೂಡಿಸಿತ್ತು. ಯಾವಾಗಲೂ ಬಂಗಾರದ ಬೆಲೆ ಒಂದೇ ರೀತಿ ಇರೋದಿಲ್ಲ. ಬದಲಿಗೆ ಒಮ್ಮೆ ಏರಿಕೆಯಾದ್ರೆ ಮತ್ತೊಮ್ಮೆ ಇಳಿಕೆ ಆಗುತ್ತದೆ. ರೇಟ್ ಕಡಿಮೆ ಆದ ಕೂಡಲೇ ಚಿನ್ನ ಖರೀದಿ ಮಾಡಲೇಬೇಕು ಎಂದು ಗೃಹಿಣಿಯರು ಕಾಯುತ್ತಲೇ ಇರುತ್ತಾರೆ. ಈಗ ಕಳೆದ 2 ದಿನಗಳಿಂದ ಚಿನ್ನದ ಬೆಲೆ ಕಡಿಮೆ ಆಗಿದ್ದು, ಇಂದು ಆಯುಧ ಪೂಜೆ ಪ್ರಯುಕ್ತ ಬಂಗಾರ ಖರೀದಿ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ.
ಚಿನ್ನದ ಬೆಲೆ ಎಷ್ಟೇ ಹೆಚ್ಚಾದರೂ ಅಥವಾ ಕಡಿಮೆ ಆದ್ರೂ ಭಾರತೀಯರು ಕೊಳ್ಳುತ್ತಾರೆ. ಯಾಕಂದ್ರೆ ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ತುಂಬಾ ಇಷ್ಟ, ಅದ್ರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತೆ. ಇದೆಲ್ಲವನ್ನ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ. ಹಲವು ರೀತಿಯಲ್ಲಿ ಚಿನ್ನದ ಉಪಯೋಗ ಪಡೆಯಬಹುದಾಗಿದೆ. ಈ ಕಾರಣಕ್ಕೆ ಚಿನ್ನ ಅಂದ್ರೆ ಭಾರತೀಯರಿಗೆ ಇಷ್ಟ, ಈಗ ಚಿನ್ನದ ಬೆಲೆ ಸಾಕಷ್ಟು ಕುಸಿತ ಕಾಣುತ್ತಿದೆ.
ಬೆಂಗಳೂರಲ್ಲಿ ಇಂದು 22 ಕ್ಯಾರಟ್ ಗೋಲ್ಡ್ ರೇಟ್ ಒಂದು ಗ್ರಾಮ್ಗೆ 7,030 ರೂ. ಇದೆ. ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲೂ ಒಂದು ಗ್ರಾಮ್ ಚಿನ್ನದ ಬೆಲೆ ಕ್ರಮವಾಗಿ 7,030 ರೂ. ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ಮಾತ್ರ ಚಿನ್ನದ ಬೆಲೆ 7,045 ರೂ. ಆಗಿದೆ. ಇಷ್ಟೇ ಅಲ್ಲ ಪ್ರತಿ ಗ್ರಾಮ್ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,752 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,030 ರೂ. ಇದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) ಮಾತ್ರ 7,669 ರೂ. ಇದೆ. ಸದ್ಯ ಚಿನ್ನ ಖರೀದಿಗೆ ಇದು ಒಳ್ಳೆಯ ಸಮಯ.