- 22 ಕ್ಯಾರೆಟ್ ಚಿನ್ನದ ಬೆಲೆ ಈಗ ಮಾರುಕಟ್ಟೆಯಲ್ಲಿ ಭಾರಿ ಕುಸಿತ
- ಪ್ರತಿ 100 ಗ್ರಾಂ ಆಭರಣದ ಬೆಲೆಯಲ್ಲಿ 5,780 ರೂಪಾಯಿ ಕಮ್ಮಿ ಆಗಿದೆ
ಚಿನ್ನ ಖರೀದಿಸಲು ಚಿನ್ನದ ಬೆಲೆ ಕಮ್ಮಿ ಆಗಲಿ ಅಂದುಕೊಂಡಿರುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜೂನ್ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕಡಿತ ಆಗಿದೆ. ಲೋಕಸಭಾ ಚುನಾವಣೆಯ ಮರು ದಿನವೇ ಬೆಲೆಯಲ್ಲಿ 4000 ರೂ ಕಮ್ಮಿಯಾಗಿತ್ತು. ಜೂನ್ ತಿಂಗಳಿನಲ್ಲಂತೂ ಚಿನ್ನದ ಬೆಲೆ ಇಳಿದಿರುವುದು ಚಿನ್ನ ಪ್ರೇಮಿಗಳಲ್ಲಿ ಸಂತಸ ತಂದಿದೆ.
ಚಿನ್ನ ಎಲ್ಲಾ ಶುಭಕಾರ್ಯಕ್ಕೆ ಕೊಳ್ಳುವ ವಸ್ತು. ಮನೆಯಲ್ಲಿ ಅಥವಾ ಮನುಷ್ಯನ ಜೀವನದಲ್ಲಿ ಯಾವುದೇ ಒಳ್ಳೆಯ ಸಂದರ್ಭ ಬಂದರೆ ಮೊದಲು ಖರೀದಿಸಬೇಕು ಅನ್ನುವ ವಸ್ತು ಚಿನ್ನ ಬೆಳ್ಳಿಯಾಗಿರುತ್ತದೆ. ಇನ್ನೆನು 1 ಲಕ್ಷ ರೂ ಮುಟ್ಟುತ್ತದೆ ಬೆಲೆ ಅಂದುಕೊಂಡಾಗ ಬೆಲೆಯಲ್ಲಿ ಏರಿಳಿತ ಕಂಡಿದೆ.
ಚಿನ್ನದ ಬೆಲೆ ಈಗ ಎಷ್ಟು ?
22 ಕ್ಯಾರೆಟ್ ಚಿನ್ನದ ಬೆಲೆ ಈಗ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. ಪ್ರತಿ 100 ಗ್ರಾಂ ಆಭರಣದ ಬೆಲೆಯಲ್ಲಿ 5,780 ರೂಪಾಯಿ ಕಮ್ಮಿ ಆಗಿದೆ. ಇನ್ನು 10 ಗ್ರಾಂನ ಆಭರಣದ ಬೆಲೆ ಕುಸಿತದ ನಂತರ 65.358 ರೂಪಾಯಿ ಇದ್ದು, 10 ಗ್ರಾಂ ಆಭರಣದ ಬೆಲೆಯಲ್ಲಿ 578 ರೂಪಾಯಿ ಕಡಿತ ಕಂಡಿದೆ. ಇದೀಗ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೂಡ ಕುಸಿತ ಕಂಡಿದ್ದು 24 ಕ್ಯಾರೆಟ್ ನ 100 ಗ್ರಾಂ ಚಿನ್ನದ ಬೆಲೆಯಲ್ಲಿ 6,300ರೂಪಾಯಿಗಳು ಕಮ್ಮಿ ಆಗಿದೆ.