ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕಸ್ಟಮ್ ಸುಂಕವನ್ನು ಶೇ.6ರಷ್ಟು ಕಡಿಮೆ ಮಾಡಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ. ಆಷಾಢ ಮುಗಿದು ಶ್ರಾವಣ ಮಾಸ ಬಂದಿದೆ. ಸಾಲುಸಾಲು ಹಬ್ಬ, ಮದುವೆ, ಸಮಾರಂಭಗಳು ಶುರುವಾಗುತ್ತವೆ. ಅದೇ ಹೊತ್ತಿನಲ್ಲಿ ಕಸ್ಟಮ್ ಸುಂಕದ ಕಡಿತದ ಈ ಮಹತ್ವದ ಘೋಷಣೆ ಚಿನ್ನ ಪ್ರಿಯರಿಗೆ ಖುಷಿ ನೀಡಿದೆ.
ಆರ್ಥಿಕ ತಜ್ಞರಾದ ರುದ್ರಮೂರ್ತಿ ಅವರು ಹೇಳುವ ಪ್ರಕಾರ ಕೇಂದ್ರ ಸರಕಾರದ ಬಜೆಟ್ ನಲ್ಲಿ ಕಸ್ಟಮ್ ಸುಂಕ ಶೇ.4 ರಷ್ಟು ಕಡಿಮೆಯಾದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಶೇ. 5 ರಿಂದ 10 ರಷ್ಟು ಕಡಿಮೆ ಆಗಲಿದೆ.
24 ಕ್ಯಾರೆಟ್ ಚಿನ್ನಕ್ಕೆ 7,000ರೂ ಇರುವ ಬೆಲೆ ಮುಂದಿನ ದಿನಗಳಲ್ಲಿ ̧6,700ರೂ ಆಗುವ ಸಾಧ್ಯತೆ ಇದೆ. ಹಾಗೂ 22 ಕ್ಯಾರೆಟ್ ಚಿನ್ನಕ್ಕೆ 6,350ರೂ ಇರುವ ಬೆಲೆ 6,000ರೂ ಕ್ಕೆ ಇಳಿಕೆ ಕಾಣಲಿದೆ. ಮತ್ತು ಬೆಳ್ಳಿ ಬೆಲೆ ಕೆಜಿ ಗೆ 84,000ರೂ ಯಿಂದ 80,000ರೂ ಗೆ ಇಳಿಕೆ ಕಾಣುತ್ತದೆ.