ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,000, ನಿಫ್ಟಿ 300 ಅಂಕ ಕುಸಿತವಾಗಿದ್ದು, ಹೂಡಿಕೆದಾರರಿಗೆ ಭಾರಿ ನಷ್ಟವಾಗಿದೆ. ಲೋಹದ ಷೇರುಗಳ ಮಾರಾಟ, ವಿದೇಶಿ ನಿಧಿಯ ಹೊರಹರಿವು ಮತ್ತು ದುರ್ಬಲ ಜಾಗತಿಕ ಮಾರುಕಟ್ಟೆ ಪ್ರವೃತ್ತಿಗಳಿಂದಾಗಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತಕ್ಕೆ ಸಾಕ್ಷಿಯಾದವು.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಬೆಳಿಗ್ಗೆ 10.46 ರ ವೇಳೆಗೆ 1,079.44 ಪಾಯಿಂಟ್ಸ್ ಕುಸಿದು 80,210.52 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 330.55 ಪಾಯಿಂಟ್ಸ್ ಕುಸಿದು 24,218.15 ಕ್ಕೆ ತಲುಪಿದೆ.
30 ಷೇರುಗಳ ಸೆನ್ಸೆಕ್ಸ್ ಬ್ಲೂ-ಚಿಪ್ ಗುಂಪಿನಲ್ಲಿ, ಟಾಟಾ ಸ್ಟೀಲ್, ಜೆಎಸ್ಥಬ್ಲ್ಯೂ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ, ಲಾರ್ಸೆನ್ & ಟೂಬ್ರೊ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ನಷ್ಟ ಅನುಭವಿಸಿದವು. ಮತ್ತೊಂದೆಡೆ, ಭಾರ್ತಿ ಏರ್ಟೆಲ್, ನೆಸ್ಟ್, ಅದಾನಿ ಪೋರ್ಟ್ಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಾಭ ಗಳಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 3,560.01 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್ಚೇಂಜ್ನ ಅಂಕಿ ಅಂಶಗಳು ತಿಳಿಸಿವೆ.