ನಮ್ಮ ಎಲ್ಲರಿಗೂ ತಿಳಿದಿರೋ ಹಾಗೆ ಕೆಲವು ವರ್ಷಗಳಿಂದ ಚಿನ್ನದ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಳೆದ ತಿಂಗಳು ಬೆಲೆ ಏರಿಳಕೆ ಆಗಿತ್ತು. ಆದ್ರೆ ಈಗ ತಿಂಗಳ ಆರಂಭದಲ್ಲೇ ನಿನ್ನೆ 2100 ರೂಪಾಯಿ ಕುಸಿತ ಕಂಡಿತ್ತು.
ಲೋಕಸಭಾ ಚುನಾವಣೆಯ ಫಲಿತಾಂಶ ದಿನದಂದೆ 4000 ರೂಪಾಯಿ ಇಳಿಕೆಯಾಗಿದೆ. ಭಾರತ ಹಾಗೂ ಇತರ ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಇಳಿದಿದೆ. 100 ಗ್ರಾಂಗೆ 4000 ಸಾವಿರ ರೂಪಾಯಿ ಇಳಿಕೆ ಯಾಗಿದೆ. ಇನ್ನು ಬೆಳ್ಳಿ ಬೆಲೆ ಗ್ರಾಂಗೆ 70 ಪೈಸೆ ಕಮ್ಮಿ ಆಗಿದೆ.
ಬೆಂಗಳೂರಿನಲ್ಲಿ ನೋಡುವುದಾದರೆ ಚಿನ್ನ 22 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆ 66,090 ರೂಪಾಯಿ. ಇನ್ನು 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆ 72,100 ರೂಪಾಯಿ. ಬೆಳ್ಳಿಯ ಬೆಲೆ 1 ಕೆ.ಜಿಗೆ 92,700 ರೂಪಾಯಿ. ಚಿನ್ನದ ಬೆಲೆ ಕಡಿಮೆ ಆಗಿದೆ ಎಂದು ಗೊತ್ತಾದ ಕೂಡಲೇ ಚಿನ್ನ ಖರೀದಿಗೆ ಜನ ಮುಗಿಬಿದ್ದಿದಾರೆ. ಇನ್ನು ಬೆಲೆ ಕಮ್ಮಿಯಾಗುವ ಸಾಧ್ಯತೆ ಇದೆ.