ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆಗಾಗಿ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ “21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ” ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು. ಗಾಂಧೀಜಿ ಅವರು ಈ ಸಮಾಜಕ್ಕೆ ಹಲವಾರು ಮಾರ್ಗದರ್ಶನಗಳನ್ನು ಕೊಟ್ಟಿದ್ದಾರೆ. ಅವರು ಕೇವಲ 20 ಹಾಗೂ 21ನೇ ಶತಮಾನಕ್ಕೆ ಸಂದೇಶ ಕೊಟ್ಟಿಲ್ಲ, ಗಾಂಧೀಜಿ ಅವರನ್ನ ನಾವು ಮರತ್ರೆ, ಇಡೀ ದೇಶವನ್ನೇ ಮರೆತ ಹಾಗೆ ಆಗುತ್ತೆ.
ನಾವು 21 ನೇ ಶತಮಾನದಲ್ಲಿ ಇಡೀ ಜಗತ್ತಿನಲ್ಲಿ ಮಹಾತ್ಮಾ ಗಾಂಧೀಜಿ ಅವರ ಶಾಂತಿ ಮಂತ್ರ ಪಠಣ ಮಾಡುತ್ತೇವೆ. ಶಾಂತಿ ನ್ಯಾಯ ಬ್ರಾತೃತ್ವದ ವಿಚಾರಗಳ ಮೇಲೆ ಹೋರಾಟ ಮಾಡಿದ್ದವರು, ನಾವೆಲ್ಲ ಒಂದು ಕುಟುಂಬ ಅಂತಾ ಬದುಕುತ್ತಿರುವ ಜನರು, ನಾವು ಎಲ್ಲರನ್ನು ಪ್ರೀತಿಸಬೇಕು ಆದ್ರೆ ದ್ವೇಷ ಮಾಡಬಾರದು, ಹೀಗಿದ್ರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲಸುತ್ತೆ. ಸಮಾನತೆ ಇರುತ್ತೆ ಎಂದು ಹೇಳಿದರು.
ಸ್ಟಿಫನ್ ಹಾಕಿಂಗ್ “ಬ್ರಿಫ್ ಆನ್ಸರ್ ಟು ದಿ ಬಿಗ್ ಕ್ವೆಶ್ಚನ್” ಎಂಬ ಪುಸ್ತಕ ಬರೆದಿದ್ದಾರೆ, ಅದರಲ್ಲಿ ಐದು ಕಾರಣ ಕೊಟ್ಟಿದ್ದಾರೆ ಮನುಷ್ಯರು ಉಳಿಯಬೇಕಾದರೆ ನಾವು ಬೇರೆ ಗ್ರಹಕ್ಕೆ ಹೋಗ್ಬಾರ್ದು, ನಾವು ಇಲ್ಲೇ ಶಾಂತಿ ಸಮಾನತೆ ಇಂದ ಇರಬೇಕು ಅಂದ್ರೆ ಮಾತ್ರ ಎಲ್ಲರಿಗೂ ಸಮಾನತೆ ಸಿಗುತ್ತೆ, ಇನ್ನು ದೇಶದಲ್ಲಿ ಕೋಮು ಸೌಹಾರ್ದತೆ ಉಳಿಬೇಕು ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪುಸ್ತಕದ ಅಂತರಾಳವನ್ನ ಒತ್ತಿ ಹೇಳಿದರು.
ಜಗತ್ತಿನಲ್ಲಿ ಆಸಹಿಷ್ಣುತೆ, ಕೋಮು ಸಂಘರ್ಷ ನಡೆಯುತ್ತಿದೆ ಅಸಹನೆ ಹೆಚ್ಚುತ್ತಿದೆ. ಇದಕ್ಕೆ ಕುವೆಂಪು ಒಂದು ಹೇಳ್ತಾರೆ, ಹುಟ್ಟುವಾಗ ಮಾನವರೆಲ್ಲ ವಿಶ್ವ ಮಾನವ ಆಗುತ್ತಾರೆ, ಆದ್ರೆ ಬೆಳೆಯುತ್ತ ವಿಶ್ವ ಮಾನವ ಆಗಲ್ಲ. ನಾವೆಲ್ಲ ವಿಶ್ವ ಮಾನವ ಆಗಲ್ಲ ಆದ್ರೆ ಪ್ರಯತ್ನ ಮಾಡಬಹುದು. ಅಸಹನೆ ಬೆಳೆಸ್ಕೊಬಾರ್ದು ಹೊಂದಾಣಿಕೆ ಸೌಹಾರ್ದತೆ ಇಂದ ಬಾಳುವ ವಾತಾವರಣ ನಿರ್ಮಾಣ ಮಾಡಬೇಕು. ಇವತ್ತು ಮನುಷ್ಯ ವೈಯಕ್ತಿಕತೆಯಿಂದ ಜಗತ್ತಿನಲ್ಲಿ ಜಾಗತಿಕ ತಾಪಮಾನ ಏರಿಕೆ ಆಗುತ್ತಿದೆ.
ಗಾಂಧೀಜಿ ಅವರ ತತ್ವಗಳನ್ನ ಅಳವಡಿಸಿಕೊಳ್ಳದೆ ಇರುವುದಕ್ಕೆ ಜಗತ್ತಿನಲ್ಲಿ ಭಯೋತ್ಪದನೆ ಹೆಚ್ಚಾಗುತ್ತಿದೆ. ಗಾಂಧೀಜಿ ಹೇಳ್ತಾರೆ ಮನುಷ್ಯರೆಲ್ಲ ಯಂತ್ರಗಳ ಗುಲಾಮರಾಗಿದ್ದಾರೆ. ಭಾರತದ ಹಳ್ಳಿಗಳು ಗ್ರಾಮ ಸ್ವರಾಜ್ಯ ಆಗಬೇಕು, ಬರಿ ರಾಜಕೀಯ ಸ್ವಾತಂತ್ರ ಸಿಕ್ರೆ ಸಾಲದು, ಸಮಾಜದಲ್ಲಿರುವ ದುರ್ಬಲರಿಗೆ ಸಾಮಾಜಿಕ ಹಾಗೂ ಸಮಾನತೆ ಸಿಗಬೇಕು, ಮಹಿಳೆಯರು ಮದ್ಯ ರಾತ್ರಿ ಒಂಟಿಯಾಗಿ ಓಡಾಡಬೇಕು, ಆಗಮಾತ್ರ ನಮಗೆ ಸ್ವಾತಂತ್ರ ಸಿಕ್ಕಂತೆ ಎಂದು ಗಾಂಧೀಜಿ ಹೇಳಿದ್ದಾರೆ ಎಂದು ಸಿಎಂ ನೆನಪಿಸಿಕೊಂಡರು.
ಅಂಬೇಡ್ಕರ್ ಹೇಳ್ತಾರೆ ಸಮಾಜದಲ್ಲಿ ಅಸಮಾನತೆ ತೊಲಗಬೇಕು, 25/11/1959 ರಂದು ಅಂಬೇಡ್ಕರ್ ಅವರು ಹಿಸ್ಟರಿಕಲ್ ಭಾಷಣದಲ್ಲಿ ಹೇಳ್ತಾರೆ ವೈವಿದ್ಯತೆ ಇರುವ ಸಮಾಜಕ್ಕೆ ಕಾಲು ಇಡುತ್ತಿದ್ದೇವೆ, ಸಮಾಜದಲ್ಲಿ ಸಾಕಷ್ಟು ಅಸಮಾನತೆ ಇದೆ, ಸಮಾಜದಲ್ಲಿ ಸಮಸಮಾನತೆ ತರೋಕೆ ಆಗಲ್ಲ ಅಂತಾರೆ. ಆದ್ರೆ ಇವತ್ತು ಜಾತಿ ಧರ್ಮ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಇವೆಲ್ಲ ಹೋಗದೇ ಇದ್ದರೆ ಸಮಾಜದಲ್ಲಿ ಸಮಾನತೆ ತರೋಕೆ ಆಗಲ್ಲ. ಸಾಕಷ್ಟು ಜನರು ಅಕ್ಷರ ಸಂಸ್ಕೃತಿ ಇಂದ ವಂಚಿತರಾಗಿದ್ದಾರೆ. ಇದರ ಬಗ್ಗೆ ಅಂಬೇಡ್ಕರ್ ಹಾಗೂ ಗಾಂಧೀಜಿ ಅವರು ಪ್ರತಿಪಾಧನೆ ಮಾಡಿದ್ರು. ಸಾಕಷ್ಟು ಜನರು ವಿದ್ಯಾವಂತರೆ ಜಾತಿ ಬೇದಭಾವ ಮಾಡೋದು, ರಾಜಕೀಯದಲ್ಲಿ ಇತರ ಮಾಡೋದು ಕಡಿಮೆ ಎಂದರು.
ಬಲಪಂಥೀಯರೇ ಜಾತಿ ಧರ್ಮ ಬೇದಬಾವ ಮಾಡುತ್ತಿದ್ದಾರೆ. ಗಾಂಧೀಜಿ ಕೊಂದ ಗೋಡ್ಸೆಯನ್ನು ಜನರು ಪೂಜೆ ಮಾಡ್ತಾರೆ, ಜನರು ಪೂಜೆ ಮಾಡುತ್ತಾರೆ ನಾವು ಇದರ ಬಗ್ಗೆ ಧ್ವನಿ ಎತ್ತಬೇಕು. ಪ್ರಜ್ಞಾವಂತ ಜನರು ಇದರ ಬಗ್ಗೆ ಎಚ್ಚರ ವಹಿಸಿಬೇಕು. ಧರ್ಮ ಹಾಗೂ ಜಾತಿ ಬೀಜ ಬಿತ್ತುವ ಕೆಲಸ ಹಾಗೂ ಸ್ವಾರ್ಥ ರಾಜಕಾರಣ ಹಾಗೂ ಸ್ವಾರ್ಥ ಜೀವನ ಮಾಡಿಕೊಳ್ಳುತ್ತಿದ್ದಾರೆ.