ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡಬೇಕು ಎಂಬ ವಿಧೇಯಕಕ್ಕೆ ರಾಜ್ಯ ಸರ್ಕಾರ ನೆನ್ನೆಯಷ್ಟೇ ಮಾಹಿತಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಿಂದ ಖಾಸಗಿ ವಲಯದಲ್ಲಿ ಸಿ ಮತ್ತು ಡಿ ವಲಯದಿಂದ ಉದ್ಯೋಗ ಮೀಸಲಿಡಬೇಕೆಂಬ ನಿಲುವನ್ನ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಸರ್ಕಾರದ ಮೇಲೆ ಹಗರಣ ಸುತ್ತಿಕೊಂಡಿದೆ, ವಿಷಯಾಂತರ ಮಾಡಲು ಈ ವಿಚಾರ ತಂದಿದ್ದೀರಿ, ಮುಡಾ ಹಗರಣ ನಿಮ್ಮ ಕೊರಳು ಸುತ್ತಲಿದೆ ಅಂತ ಈ ನಿರ್ಧಾರ ಮಾಡಿದ್ದೀರಿ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಣ ವರ್ಗಾವಣೆ ಮಾಡಿ ವಂಚನೆ ಮಾಡಿರೋದು ನಿಮ್ಮ ಗಮನಕ್ಕೂ ಬಂದಿದೆ. ನಿಮ್ಮ ಸರ್ಕಾರದ ಇಮೇಜ್ಗೆ ಚ್ಯುತಿ ತಂದಿದೆ. ಹಾಗಾಗಿ ಭಾವನಾತ್ಮಕ ವಿಚಾರಕ್ಕೆ ಈ ನಿಲುವು ತಂದಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ವಿಚಾರ ಮಂಡನೆ ಮೊದಲು, ಸಂಬಂಧಿಸಿದ ಉದ್ದಿಮೆದಾರರ ಜೊತೆ ಸಮಾಲೋಚನೆ ಮಾಡಬೇಕಿತ್ತು. ಉದ್ದಿಮೆಯಲ್ಲಿ ಎಷ್ಟು ಉದ್ಯೋಗ ಇದೆ, ಕನ್ನಡಿಗರಿಗೆ ಎಷ್ಟು, ಹೊರಗಿನವರಿಗೆ ಎಷ್ಟು ಅಂತಮಾಹಿತಿ ಪಡೆಯಬೇಕಿತ್ತು. ಯಾವ ಉದ್ಯೋಗಕ್ಕೆ ಕೌಶಲ್ಯ ಅವಶ್ಯಕತೆ ಇದೆ ಅಂತ ಮಾಹಿತಿ ಪಡೆಯಬೇಕಿತ್ತು. ಅದು ಬದ್ಧತೆ ಆಗಲಿದೆ. ಈ ವಿಷಯಕ್ಕೆ ಎಷ್ಟು ಸಭೆ ಮಾಡಿದ್ದೀರಿ? ಎಂದು ಸಿಎಂ ಗೆ ಪ್ರಶ್ನೆ ಮಾಡಿದ್ದಾರೆ.
ನಿಮಗೆ ಆಗ್ರಹ ಮಾಡ್ತೀನಿ, ಹೇಗಿದ್ದ ಸಿದ್ದರಾಮಯ್ಯ, ಹೇಗಾದ್ರು ಅನ್ನೋದಕ್ಕೆ ನೀವು ಜೀವಂತ ಉದಾಹರಣೆ. ಚಾಮುಂಡೇಶ್ವರಿ ಉಪಚುನಾವಣೆ ಬಂದಾಗ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು, ಆಗ ಮಾಧ್ಯಮ ನನ್ನನ್ನ ಕೇಳಿದಾಗ, ಹೋರಾಟಗಾರರು ಸೋಲಬಾರದು ಅಂತ ಹೇಳಿದ್ದೆ. ನೀವು ಗೆಲ್ಲಬೇಕು ಅಂತ ಹೇಳಿದ್ದೆ. ಅಹಿಂದ ನಾಯಕರು ನೀವು. ರಾಜಕೀಯವಾಗಿ ನೀವು ಬೇರೆ ಪಕ್ಷ, ನಾವು ಬೇರೆ ಪಕ್ಷ. ಆದ್ರೆ SCP-TSP ಹಣ ದುರ್ಬಳಕೆಗೆ ನಿಮ್ಮ ಸರ್ಕಾರವೇ ಹೊಣೆ. ಲೂಟಿಯಲ್ಲಿ ನಿಮ್ಮ ಸಚಿವ ಸಂಪುಟ ಸಹೋದ್ಯೋಗಿ ಭಾಗಿಯಾಗಿದ್ದಾರೆ. ಈ ರೀತಿ ವರ್ತನೆ ಹಿಂದಿನ ನಾಯಕ ಸಿದ್ದರಾಮಯ್ಯ ಇಲ್ಲ, ಕೇವಲ ಆಷಾಢ ಭೂತಿ ಅಷ್ಟೇ. ಈಗ ಸಿದ್ದ ಕಲೆ ಸಿದ್ದರಾಮಯ್ಯ ಅಷ್ಟೇ ಇರೋದು ಎಂದು ಮುಖ್ಯಮಂತ್ರಿಯ ಕಾಲೆಳೆದರು.
SCP-TSP ಅನುದಾನ ದುರ್ಬಳಕೆ ಆಗಿದೆ, ಆ ಹಣ ಅವರಿಗೇ ಬಳಕೆ ಆಗಬೇಕು, ನಿಮ್ಮ ಗ್ಯಾರಂಟಿಗೆ ಅಲ್ಲ. ನಿಗಮದ ಹಣ ದುರ್ಬಳಕೆ ಕೂಡಲೇ ನಿಲ್ಲಿಸಬೇಕು. ವಾಲ್ಮೀಕಿ, ಮುಡಾ, ಪರಿಶಿಷ್ಟ ಹಣದ ಹೊಣೆ ನೀವು ಹೊರಬೇಕು. ಅರ್ಕಾವತಿ ರೀಡು ಹಗರಣ ನಿಮ್ಮ ಮೇಲೆ ಬಂದಿತ್ತು. ರಿಯಲ್ ಎಸ್ಟೇಟ್ ಅವರಿಂದ ಕೋಟ್ಯಾಂತರ ಹಣ ಪಡೆದಿರೋ ಆರೋಪ ಬಂದಿತ್ತು. ಕೆಂಪಣ್ಣ ಆಯೋಗ ರಚನೆ ಮಾಡಿದ್ರಿ. ಬಳಿಕ ದೇಸಾಯಿ ಆಯೋಗ ರಚನೆ ಮಾಡಿದ್ರಿ. ಸದನದಲ್ಲಿ ಮೊದಲು ಕೆಂಪಣ್ಣ ಆಯೋಗದ ವರದಿ ತಂದ್ರಿ. ಆದ್ರೆ ಅದನ್ನ ಮುಚ್ಚಿಟ್ರಿ, ಬಳಿಕ ದೇಸಾಯಿ ಆಯೋಗ ಮಾಡಿದ್ರಿ, ನಿಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡ್ರಿ, ಲೋಕಾಯುಕ್ತ ಪವರ್ ಕಡಿಮೆ ಮಾಡಿ, ACB ರಚನೆ ಮಾಡಿದ್ರಿ. ಎರಡೂ ಇಲಾಖೆ ದುರ್ಬಳಕೆ ಮಾಡಿಕೊಂಡ್ರಿ, ನೀವು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆ ಸಿ.ಟಿ ರವಿ ಆಗ್ರಹ ಮಾಡಿದ್ದಾರೆ.