ರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಂದನಾರ್ಪಣೆ ಸಲ್ಲಿಸಿದರು. ಈ ವೇಳೆ ರಾಷ್ಟ್ರಪತಿಗಳ ಭಾಷಣದ ಮಹತ್ವ ವಿವರಿಸಿದ ಪ್ರಧಾನಿ ಮೋದಿ. ಸಂಸತ್ತಿನ ಬಜೆಟ್ ಅಧಿವೇಶನ ಇಂದು 5 ನೇ ದಿನಕ್ಕೆ ಕಾಲಿಟ್ಟಿದೆ. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31 ರಿಂದ ಫೆಬ್ರವರಿ 13ರ ವರೆಗೆ ನಡೆಯುತ್ತಿದ್ದರೆ ಎರಡನೇ ಭಾಗ ಮಾರ್ಚ್ 10 ರಿಂದ ಏಪ್ರಿಲ್ 4 ರವರೆಗೆ ನಡೆಯಲಿದೆ.
ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು ಇಂತಿವೆ…
- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಮ್ಮ ದೇಶಕ್ಕೆ ಭವಿಷ್ಯದ ದಿಕ್ಕನ್ನು ತೋರಿಸಿದ್ದಾರೆ.
- ರಾಷ್ಟ್ರಪತಿಗಳ ಭಾಷಣ ಸ್ಪೂರ್ತಿದಾಯಕ, ಪರಿಣಾಮಕಾರಿ ಮತ್ತು ನಮ್ಮೆಲ್ಲರಿಗೂ ಭವಿಷ್ಯದ ಕೆಲಸಕ್ಕೆ ಮಾರ್ಗಸೂಚಿಯಾಗಿದೆ.
- ರಾಷ್ಟ್ರಪತಿಗಳ ಭಾಷಣಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ.
- ಸಾರ್ವಜನಿಕರು ನನಗೆ ಮೂರನೇ ಬಾರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ.
- ನಾನು ನಮ್ಮ ದೇಶದ ಜನರಿಗೆ ಕೃತಜ್ಞನಾಗಿದ್ದೇನೆ.
- ನಮ್ಮ ದೇಶದ ಜನರು ನಮ್ಮ ಅಭಿವೃದ್ಧಿ ಮಾದರಿಯನ್ನು ಪರೀಕ್ಷಿಸಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ ಮತ್ತು ಬೆಂಬಲಿಸಿದ್ದಾರೆ.
- ಭಾರತ ದೇಶವು ಮೊದಲು ಈ ಒಂದು ಭಾವನೆ ಮತ್ತು ಸಮರ್ಪಣೆಯೊಂದಿಗೆ ಈ ವಾಕ್ಯವನ್ನು ನಮ್ಮ ನೀತಿಗಳು, ನಮ್ಮ ಕಾರ್ಯಕ್ರಮಗಳು ಮಾನದಂಡವಾಗಿ ಪರಿಗಣಿಸುವ ಮೂಲಕ ನಾವು ನಿರಂತರವಾಗಿ ದೇಶಕ್ಕೆ ಸೇವೆ ಸಲ್ಲಿಸಲು ಪ್ರಯತ್ನಿಸಿದ್ದೇವೆ .
- ಕುಟುಂಬವೇ ಮೊದಲು ಎನ್ನುವ ಕಾಂಗ್ರೆಸ್ನಿಂದ ಸಬ್ಕಾ ವಿಕಾಸ್ ನಿರೀಕ್ಷಿಸುವುದೇ ತಪ್ಪು.
- ನಾವು ನಿರಂತರವಾಗಿ ದೇಶಕ್ಕೆ ಸೇವೆ ಸಲ್ಲಿಸಲು ಪ್ರಯತ್ನಿಸಿದ್ದೇವೆ ಎಂದು ನಾನು ಬಹಳ ಹೆಮ್ಮೆ ಮತ್ತು ತೃಪ್ತಿಯಿಂದ ಹೇಳುತ್ತೇನೆ.
- ಕಾಂಗ್ರೆಸ್ನಿಂದ ಸಬ್ಕಾ ಸಾಥ್, ಸಬ್ ಕಾ ವಿಕಾಸ್ ಸಾಧ್ಯವಿಲ್ಲ.
- ಜನ ನಮ್ಮ ಅಭಿವೃದ್ಧಿ ಮಂತ್ರವನ್ನು ಒಪ್ಪಿಕೊಂಡಿದ್ದಾರೆ ನಾವು ಬಡವರಿಗಾಗಿ ಶೇ 10 ರಷ್ಟು ಮೀಸಲಾತಿಯನ್ನು ನೀಡಿದ್ದೇವೆ.
- ಕಾಂಗ್ರೆಸ್ನ ರಾಜಕೀಯ ತಂತ್ರ ಕೇವಲ ಸುಳ್ಳು ಮತ್ತು ಭ್ರಷ್ಟಾಚಾರದಿಂದ ಕೂಡಿದೆ ‘ಜಾತಿ ವಿಷಬೀಜವನ್ನು ಸಮಾಜದ ಎಲ್ಲೆಡೆ ಬಿತ್ತಲಾಗುತ್ತಿದೆ.
- ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರನ್ನು ಕಾಂಗ್ರೆಸ್ನವರು ದ್ವೇಷಿಸುತ್ತಾರೆ ಅಂಬೇಡ್ಕರ್ರನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಬೇಕಂತಲೇ ಸೋಲಿಸಿತು .
- ಭಾರತ ರತ್ನ ಅವಾರ್ಡ್ ಅನ್ನು ಕಾಂಗ್ರೆಸ್ ಅಂಬೇಡ್ಕರ್ಗೆ ಕೊಡಲಿಲ್ಲ’ ಒತ್ತಾಯಪೂರ್ವಕವಾಗಿ ಎಲ್ಲರ ಬಾಯಲ್ಲೂ ‘ಜೈ ಭೀಮ್’ ಹೇಳಿಸುತ್ತಿದ್ದಾರೆ .
- ದಲಿತರಿಗೆ ಕಾಂಗ್ರೆಸ್ ಯಾವಾಗಲೂ ತೊಂದರೆಗಳನ್ನೇ ಕೊಟ್ಟಿದೆ’ ದಲಿತರ ಕೌಶಲ್ಯಾಭಿವೃದ್ಧಿಗೆ ನಾವು ಹೆಚ್ಚು ಆದ್ಯತೆ ನೀಡುತ್ತಿದ್ದೇವೆ .
- ಅಂಬೇಡ್ಕರ್ ವಿಚಾರಧಾರೆಗಳನ್ನು ಕಾಂಗ್ರೆಸ್ ಎಂದಿಗೂ ಅನುಸರಿಸಿಲ್ಲ.
- ನಾನು ಬಡವರ ಮತ್ತು ಮಧ್ಯಮ ವರ್ಗದವರ ಪರವಾಗಿದ್ದೇನೆ .
- ಮಧ್ಯಮ ವರ್ಗದವರಿಗೆ ಶಕ್ತಿಯೇ ಅತೀ ದೊಡ್ಡ ಮೂಲವಾಗಿದೆ.
- ಸ್ಟಾರ್ಟ್ ಅಪ್ ಕಂಪನಿ ತೆರೆಯುವವರೆಲ್ಲಾ ಮಾಧ್ಯಮ ವರ್ಗದಿಂದ ಬಂದವರೇ.
- ಮಧ್ಯಮ ವರ್ಗದವರಿಗೆ ಬಜೆಟ್ನಲ್ಲಿ ತಂದ ತೆರಿಗೆ ನೀತಿ ತುಂಬಾ ಅನುಕೂಲವಾಗಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc