ಟಿ20ಯಲ್ಲಿ ಶತಕ ಸಿಡಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಭಾರತದ ಅತ್ಯಂತ 7ನೇ ಕಿರಿಯ ಆಟಗಾರ. ಇಂದಿಗೂ ಕೂಡಾ ಅತಿ ಕಡಿಮೆ ವಯಸ್ಸಿನಲ್ಲಿ ಶತಕ ಸಿಡಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಲ್ಲಿದೆ. ರೋಹಿತ್ ಶರ್ಮಾ 20 ವರ್ಷ 143 ದಿನದ ವಯಸ್ಸಿನಲ್ಲಿದ್ದಾಗ ಪಂದ್ಯಶ್ರೇಷ್ಟ ಪುರಸ್ಕಾರ ಪಡೆದಿದ್ದರು. ರೋಹಿತ್ ನಂತರದ ಸ್ಥಾನದಲ್ಲಿ ಕ್ರಮವಾಗಿ ನಿತೀಶ್ ರೆಡ್ಡಿ, ರವಿ ಬಿಷ್ಣೋಯ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್, ಯಶಸ್ವಿ ಜೈಸ್ವಾಲ್ ಬರುತ್ತಾರೆ.
ಇನ್ನು ಟಿ20ಯಲ್ಲಿ ಭಾರತದ ಪರ ಶತಕ ಗಳಿಸಿದ 2ನೇ ಕಿರಿಯ ಆಟಗಾರ ಎಂಬ ದಾಖಲೆಯೂ ತಿಲಕ್ ವರ್ಮಾ (21 ವರ್ಷ 05 ದಿನ) ಹೆಸರಿಗೆ ಸೇರಿಕೊಂಡಿದೆ. ಮೊದಲ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ (21 ವರ್ಷ, 279 ದಿನ) ಇದ್ದಾರೆ. ಅಲ್ಲದೆ ಪಂದ್ಯಶ್ರೇಷ್ಟ ಪುರಸ್ಕಾರ ಪಡೆದ ಟೀಂ ಇಂಡಿಯಾದ 51ನೇ ಆಟಗಾರ. ಅಲ್ಲದೆ ವಿದೇಶಿ ಕ್ರೀಡಾಂಗಣದಲ್ಲಿಯೇ ಮೊದಲ ಟಿ20 ಶತಕ ಗಳಿಸಿದ ಸಾಧನೆಯೂ ತಿಲಕ್ ವರ್ಮಾ ಹೆಸರಿಗೆ ಸಂದಿದೆ.
ಇನ್ನು ಇದೇ ಸರಣಿಯಲ್ಲಿ ದ.ಆಫ್ರಿಕಾ ವಿರುದ್ಧ ಟಿ20ಯಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಹೊಡೆದ ಸ್ಥಾನವನ್ನು ಸಂಜು ಸ್ಯಾಮ್ಸನ್ ಜೊತೆ ಹಂಚಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 107 ರನ್ ಗಳಿಸಿದ್ದರು. ಈಗ ತಿಲಕ್ ವರ್ಮಾ ಕೂಡಾ 107 ರನ್ ಗಳಿಸಿ ಜಂಟಿ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ. ಈ ಎಲ್ಲ ದಾಖಲೆಗಳ ಜೊತೆಯಲ್ಲಿ ಶತಕ ಗಳಿಸಿದ ಹಾದಿಯ ವಿವರ ನೋಡೋಣ.