ದೀಪಾವಳಿ ವೇಳೆಗಾದರೂ ಕಾರು ಮಾರಾಟ ಏರಬಹುದು ಎಂಬ ಮಾರಾಟಗಾರರ, ಕಂಪನಿಗಳ ನಿರೀಕ್ಷೆ ಹುಸಿಯಾಗಿದ್ದು, ಈ ಹಬ್ಬದ ಋತುವಿನಲ್ಲೂ ಕಾರು ಮಾರಾಟ ನಿರೀಕ್ಷಿತ ವೇಗ ಪಡೆದಿಲ್ಲ. ಹೀಗಾಗಿ ಮಾರಾಟಗಾರರ ಬಳಿ ಮಾರಾಟಕ್ಕೆ ಕಾದು ಕುಳಿತ ಕಾರುಗಳ ಸಂಖ್ಯೆ 7.69 ಲಕ್ಷಕ್ಕೆ ಏರಿದೆ.
ಇವುಗಳ ಮೊತ್ತ 79000 ಕೋಟಿ ರುಪಾಯಿ, ಕಳೆದ ಮೇ ತಿಂಗಳಿನಿಂದಲೂ ವಾಹನಗಳ ಮಾರಾಟ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ನಲ್ಲಿ ಶೇ.18.81ರಷ್ಟು ವಾಹನ ಮಾರಾಟ ಕುಸಿದಿದೆ. ಆರಂಭಿಕ ಬೆಲೆಯಾದ 10 ಲಕ್ಷ ಮೌಲ್ಯದ ಕಾರುಗಳನ್ನು ಕೊಳ್ಳಲು ಗ್ರಾಹಕರು ಮುಂದೆ ಬರುತ್ತಿಲ್ಲ ಎಂದು ಮಾರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಿಲೀಸ್ ಆದ ಬಳಿಕ ದರ್ಶನ್ ಮಾಡಿದ್ದೇನು..?