ತುಮಕೂರು ಬೆಂಗಳೂರು ರಸ್ತೆ, ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಲಕ್ಷಾಂತರ ಜನ ಪ್ರತಿನಿತ್ಯ ತಮ್ಮ ಕೆಲಸಗಳಿಗೆ ಈ ರಸ್ತೆಯನ್ನ ಬಳಸುತ್ತಾರೆ. ಈ ಒಂದು ರಸ್ತೆಯಲ್ಲಿ ತಿಂಗಳಿಗೆ ಸಾಕಷ್ಟು ಅಪಘಾತಗಳು ಸಹ ನಡೆಯುತ್ತವೆ. ಆದರಂತೆ ಇತ್ತೀಚೆಗೆ ಐಟಿ ಕಂಪನಿಯ ಮಾಲೀಕ ಚಂದ್ರಮ್ ಯೇಗಪ್ಪಗೋಳ ಎಂಬುವವರು ಸಹ ಕುಟುಂಬ ಸಮೇತ ಕ್ರಿಸ್ಮಸ್ ಹಬ್ಬದ ಸಂಬ್ರಮವನ್ನ ತಮ್ಮ ಹುಟ್ಟೂರಲ್ಲಿ ಆಚರಿಸ ಬೇಕೆಂದು ಹುಟ್ಟೂರಿಗೆ ಈ ರಸ್ತೆ ಮುಕಾಂತರ ತೆರಳುತ್ತಿದ್ದರು. ಆದರೆ ವಿಧಿ ಅವರ ಕನಸಿಗೆ, ಸಂತೋಷಕ್ಕೆ ಬೇರೆಯದ್ದೆ ರೀತಿಯಲ್ಲಿ ಬ್ರೇಕ್ ಹಾಕಿತ್ತು. ಹೌದು ಅವರು ತೆರಳುತ್ತಿದ್ದ ವೋಲ್ವೋ ಕಾರಿನ ಮೇಲೆ ಕಂಟೇನರ್ ಡಿಕ್ಕಿ ಹೊಡೆದು ಕಾರಿನ ಮೇಲೆಯೇ ಬಿದ್ದು ಭೀಕರ ಅಪಘಾತ ಸಂಬವಿಸಿತ್ತು.
ಅಪಘಾತದ ಭೀಕರತೆಗೆ ಚಂದ್ರಮ್ ಸೇರಿದಂತೆ ಆತನ ಕುಟುಂಬದ 6 ಜನರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ನಡೆದಿದ್ದು ಬೆಂಗಳೂರು- ತುಮಕೂರು ಮಧ್ಯೆ ಇರುವ ನೆಲಮಂಗಲದ ಸಮೀಪ. ಈ ಒಂದು ದುರ್ಘಟನೆಗೆ ರಾಜ್ಯವೇ ಮರುಕಪಟ್ಟಿತ್ತು. ಆದರೆ ನೆಲಮಂಗಲ ಸುತ್ತಮುತ್ತ ಇರುವ ಜನರಿಗೆ ಇದು ಸಾಮಾನ್ಯವಾಗಿತ್ತು. ಏಕೆಂದರೆ ಇಂತಹ ಅಪಘಾತಗಳನ್ನ ಅವರು ತುಂಬಾ ಸಲ ನೋಡಿದ್ದರು. ಅವರ ಈ ಒಂದು ರೀತಿಯ ಅಭಿಪ್ರಾಯಕ್ಕೆ ಕಾರಣವೂ ಇದೆ. ಅದೇನೆಂದರೆ ಕಾರ್ ನಂಬರ್. ಹೌದು ಕಾರಿನ ನಂಬರ್ ಮೇಲೆಯೇ ಈ ಒ?ಂದು ರೀತಿಯ ಸಾಮಾನ್ಯ ಅಭಿಪ್ರಾಯಕ್ಕೆ ಬಂದಿದ್ದರು ನೆಲಮಂಗಲ ಜನತೆ. ಹಾಗಾದ್ರೆ ಏನಿದು ಕಾರ್ ನಂಬರ್ ಸೀಕ್ರೆಟ್ ಅಂತ ನಾವಿಲ್ಲಿ ನೋಡೋದಾದ್ರೆ..
ನೆಲನಂಗಲ ಸಮೀಪ ಅಪಘಾತಕ್ಕೆ ಸಿಲುಕಿದ ಚಂದ್ರಮ್ ಯೇಗಪ್ಪಗೋಳ ಅವರ ವೋಲ್ವೋ ಕಾರ್ನ ನಂಬರ್ ಪ್ಲೇಟ್ KA 02 ND 1536. ಈ ಒಂದು ವೋಲ್ವೋ ಕಾರ್ ಮೇಲೆ ಬಿದ್ದ ಕಂಟೇನರ್ ಲಾರಿಯ ನಂಬರ್ ಪ್ಲೇಟ್ KA 52 B 3076. ಎರಡೂ ವಾಹನಗಳ ನಂಬರ್ ಪ್ಲೇಟ್ನ ಕೊನೆಯ ಸಂಖ್ಯೆ 6. ಈ ಒಂದು ನಂಬರ್ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕ್ಕೆ ಕಾರಣ ಎಂಬುವುದು ಸ್ಥಳೀಯರ ಮಾತು.
ಹಾಗಾದ್ರೆ ನಿಜಕ್ಕೂ ಈ ಕಾರ್ ನಂಬರ್ ಅಪಘಾತಕ್ಕೆ ಕಾರಣ ಆಗಿದ್ಯ ಎಂಬುದು ನಿಜಕ್ಕೂ ವಿಸ್ಮಯವೇ ಸರಿ. ಇದರ ಬಗ್ಗೆ 6 ವರ್ಷಗಳ ಹಿಂದೆಯೇಚರ್ಚೆ ನಡೆದಿತ್ತು. ಈ ಒಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳ ನಂಬರ್ ಪ್ಲೇಟ್ನ ಕೊನೆಯ ಸಂಖ್ಯೆ 6 ಆಗಿದ್ದಲ್ಲಿ ಅವರು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಓಡಾಡಬೇಕು ಅನ್ನೋದು ಸ್ಥಳೀಯರ ಸಲಹೆ. ಇದನ್ನು ನಂಬಲು ಸ್ವಲ್ಪ ಕಷ್ಟ ಎನಿಸಿದರೂ ಸ್ಥಳಿಯರು ಹೇಳುವ ಸತ್ಯವೇ ಬೇರೆ. ಸಾಕಷ್ಟು ಅಪಘಾತಕ್ಕೆ ಈಡಾಗಿರುವ ವಾಹನಗಳ ಕೊನೆ ಸಂಖ್ಯೆ 6.
ನೆಲಮಂಗಲ ಟ್ರಾಫಿಕ್ ಪೊಲೀಸ್ ಸ್ಟೇಷನ್ನಲ್ಲಿ ಅಪಘಾತವಾಗಿರುವ ವಾಹನಗಳನ್ನು ಇರಿಸಲಾಗಿದೆ. ಅಶ್ಚರ್ಯ ಎನ್ನುವಂತೆ ಬಹುತೇಕ ಗಾಡಿಗಳ ನಂಬರ್ ಪ್ಲೇಟ್ನ ಕೊನೆ ಸಂಖ್ಯೆ 6.. ಕೊನೇ ನಂಬರ್ 6 ಆಗಿದ್ದರೆ ಈ ಭಾಗದಲ್ಲಿ ಆಕ್ಸಿಡೆಂಟ್ ಆಗೋದು ಖಚಿತ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎನ್ನುತ್ತಾರೆ ಸ್ಥಳಿಯರು. KA 51 Q 5156, KA 42 H 6326, KA 44 J 5086, KA 04 C 9626, KA 51 D 1786, KA 18 A 9426, KA 54 1676, KA 02 D 3406 ಹಾಗೂ KA 44 K 1706 ನಂಬರ್ನ ಗಾಡಿಗಳು ಅಪಘಾತಕ್ಕೆ ಈಡಾಗಿವೆ. ಇದರ ಸಾಲಿಗೆ ಮತ್ತೆರಡು ವಾಹನಗಳು ಸೇರ್ಪಡೆಯಾಗಿವೆ. ಈ ಹೊಸ ಅಪಘಾತದಿಂದ ಮತ್ತೆ ನಂಬರ್ ಪ್ಲೇಟ್ 6 ಭೂತ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಇದರ ಜೊತೆಗೆ ಈ ಒಂದು ಅಪಘಾತದಲ್ಲಿ ಸಾವಿಘೀಡಾದವರ ಸಂಖ್ಯೆಯು ಸಹ 6. ಹೀಗಾಗಿ ಜನರಲ್ಲಿ ಇನಷ್ಟು ಆತಂಕ ಮನೆಮಾಡಿದೆ.