ಇನ್ನೇನು 2024 ಮುಗಿಯಲಿದೆ. 2025ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ… ಹೊಸ ವರ್ಷವನ್ನು ಹೊಸ ಹರುಷದಿಂದ ಸ್ವಾಗತ ಮಾಡುವ ಮುನ್ನ 2024ರತ್ತ ಹಿಂದಿರುಗಿ ನೋಡುವುದಾದರೆ 2024ರಲ್ಲಿ ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ನಡುವೆ ಈ ವರ್ಷ ಕೆಲ ತಾರೆಯರು ತಮ್ಮ ವೈವಾಹಿಕ ಬದುಕನ್ನ ಅಂತ್ಯಗೊಳಿಸಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಕೆಲ ತಾರೆಯರು ಈ ವರ್ಷ ವಿಚ್ಛೇದನ ಪಡೆದಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದು ನಾನೊಂದು ತೀರಾ ನೀನೊಂದು ತೀರಾ ಎನ್ನುವ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ತಮ್ಮ ದಾಂಪತ್ಯ ಜೀವನಕ್ಕೆ ಈ ವರ್ಷ ಪೂರ್ಣವಿರಾಮವಿಟ್ಟ ಪ್ರಮುಖ ತಾರೆಯರ ಪಟ್ಟಿ ನೋಡುವುದಾದರೆ…
ಐಶ್ವರ್ಯಾ ಮತ್ತು ನಟ ಧನುಷ್
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್ ಇತ್ತೀಚೆಗೆ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ, 2004ರಲ್ಲಿ ಐಶ್ವರ್ಯಾ ಹಾಗೂ ಧನುಷ್ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 18 ವರ್ಷಗಳ ಕಾಲ ಒಟ್ಟಿಗೆ ಇದ್ದ ಈ ಜೋಡಿ 2022ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿತ್ತು. ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. 2024ರಲ್ಲಿ ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದಾರೆ.
ಎ.ಆರ್.ರೆಹಮಾನ್ ಮತ್ತು ಸ್ಮರಾ ಬಾನು
ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಮತ್ತು ಸ್ಮರಾ ಬಾನು ಅವರ ವಿಚ್ಛೇದನ ಸುದ್ದಿ ಕೇಳಿ ಅನೇಕರು ಶಾಕ್ಗೆ ಒಳಗಾಗಿದ್ದಾರೆ. ಈ ಜೋಡಿ ಗ್ರೇ ಡಿವೋರ್ಸ್ ಪಡೆದಿದೆ. ಎ.ಆರ್. ರೆಹಮಾನ್ ಇಬ್ಬರೂ 1995ರಲ್ಲಿ ವಿವಾಹವಾದರು. ಈ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. 29 ವರ್ಷಗಳ ಬಳಿಕ ಎ.ಆರ್. ರೆಹಮಾನ್ ದಂಪತಿ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಸೈರಾ ಬಾನು ಹಾಗೂ ಎ.ಆರ್. ರೆಹಮಾನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಚ್ಛೇದನ ಘೋಷಿಸಿದರು.
ಹಾರ್ದಿಕ್ ಮತ್ತು ನತಾಶಾ
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ನತಾಶಾ ಸ್ಟ್ರಾಂಕೋವಿಕ್ ವಿಚ್ಛೇದನದ ಬಗ್ಗೆ ವದಂತಿಗಳು ಈ ವರ್ಷದ ಐಪಿಎಲ್ ಸಮಯದಿಂದಲೂ ಇತ್ತು. ಅದಾದ ಬಳಿಕ ಟಿ20 ವಿಶ್ವಕಪ್ ವೇಳೆ ಈ ವದಂತಿಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು ಆದರೆ ವಿಶ್ವಕಪ್ ಬಳಿಕ ಇಬ್ಬರು ವಿಚ್ಛೇದನ ಘೋಷಿಸಿದರು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2020ರಲ್ಲಿ ಇಬ್ಬರೂ ವಿವಾಹವಾದರು. ಅದೇ ವರ್ಷದಲ್ಲಿ ಮಗ ಅಗಸ್ಯನಿಗೆ ನತಾಶಾ ಜನ್ಮ ನೀಡಿದರು. ಮದುವೆಯಾದ 4 ವರ್ಷಕ್ಕೆ ಈ ಜೋಡಿ ದಾಂಪತ್ಯ ಕೊನೆಗೊಳಿಸಿ ದೂರವಾದರು.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿವಾಹ ಆ ಸಮಯದಲ್ಲೇ ಭಾರೀ ಚರ್ಚೆಯ ವಿಷಯವಾಗಿತ್ತು. 14 ವರ್ಷಗಳ ನಂತರ, ದಂಪತಿ ನಡುವೆ ಬಿರುಕು ಕಾಣಿಸಿಕೊಂಡಿತು. ಶೋಯೆಬ್ ಈ ವರ್ಷದ ಆರಂಭದಲ್ಲಿ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಸಾನಿಯಾ ವಿಚ್ಛೇದನದ ನಂತರವೇ ಶೋಯೆಬ್ ಮದುವೆಯಾದರು ಎಂದು ಸಾನಿಯಾ ತಂದೆ ಹೇಳಿದರು. ಸಾನಿಯಾ ಮತ್ತು ಶೋಯೆಬ್ಗೆ ಇಜಾನ್ ಎಂಬ ಮಗನಿದ್ದಾನೆ.
ಊರ್ಮಿಳಾ-ಮೋಶಿ ಅಖರ್ ಮಿರ್
ಬಾಲಿವುಡ್ ನಟಿ ಊರ್ಮಿಳಾ-ಮೋಶಿ ಅಖರ್ ಮಿರ್ 2016ರಲ್ಲಿ ವಿವಾಹವಾಗಿದ್ದರು. ಈ ಬಾಲಿವುಡ್ ನಟಿಯ ಮದುವೆ ಕೂಡ ಬಹುಕಾಲ ಉಳಿಯಲಿಲ್ಲ. 8 ವರ್ಷಗಳ ಇಬ್ಬರು ವಿಚ್ಚೇದನ ಪಡೆದು ದೂರ ದೂರ ಆಗಿದ್ದಾರೆ. ಹಾಲಿವುಡ್ ನಟರಾದ ಜೆನ್ನಿಫರ್ ಲೋಪೆಜ್-ಬೆನ್ ಅಫೈಕ್ ಬೇರ್ಪಟ್ಟು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ವರ್ಷ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅವರು ಪ್ರಸ್ತುತ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ
ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಆಗಿದ್ದ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆಯುವ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದು ದೂರವಾಗಿದ್ದಾರೆ.
ಇಶಾ ಡಿಯೋಲ್- ಭರತ್ ತಕ್ಕಾನಿ
ಬಾಲಿವುಡ್ ನಟಿ ಹೇಮಾ ಮಾಲಿನಿ ಪುತ್ರಿ ಹಾಗೂ ನಟಿ ಇಶಾ ಡಿಯೋಲ್- ಭರತ್ ತಕ್ಕಾನಿ ದಂಪತಿ ಈ ವರ್ಷ ತಮ್ಮ ವಿಚ್ಛೇದನ ಘೋಷಿಸಿದ್ದಾರೆ. ಆ ಮೂಲಕ 11 ವರ್ಷಗಳ ದಾಂಪತ್ಯಕ್ಕೆ ನಟಿ ತೆರೆ ಎಳೆದಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಜೆನ್ನಿಫರ್ ಲೋಪೆಜ್-ಬೆನ್ ಅಫೈಕ್
ಹಾಲಿವುಡ್ ನಟರಾದ ಜೆನ್ನಿಫರ್ ಲೋಪೆಜ್-ಬೆನ್ ಅಫೈಕ್ ಬೇರ್ಪಟ್ಟು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ವರ್ಷ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅವರು ಪ್ರಸ್ತುತ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.