ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಬಜೆಟ್ ಭಾಷಣದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಭಾಷಣದಲ್ಲಿ ಅವರು ಕ್ಯಾನ್ಸರ್ ಚಿಕಿತ್ಸೆ ಪಡೆಯುವವರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಮೂರು ಕ್ಯಾನ್ಸರ್ ಔಷಧಗಳ ಮೇಲೆ ಆಮದು ಸುಂಕ ವಿನಾಯಿತಿ ಘೋಷಿಸಲಾಗುತ್ತಿದೆ. ಅಲ್ಲದೇ ಬಿಸಿಡಿ, ಎಕ್ಸ್-ರೇ ಟ್ಯೂಬ್, ಎಕ್ಸ್-ರೇ ಮೆಷಿನ್ ಡಿಕೆಕ್ಟರ್ ಮೇಲೆ ವಿನಾಯಿತಿ ನೀಡಲಾಗುತ್ತದೆ ಎಂದರು. ಕಳೆದ ಹಲವು ವರ್ಷಗಳಿಂದ ಸರ್ಕಾರ ದೇಶಿಯ ಔಷಧ ಉತ್ಪಾದಕರಿಗೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರೋತ್ಸಾಹ ನೀಡಲು ಆಮದು ಸುಂಕ ವಿನಾಯಿತಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಹೇಳಿತ್ತು. ಐದು ಕ್ಯಾನ್ಸರ್ ಜೀವರಕ್ಷಕ ಔಷಧಗಳ ಸುಂಕವನ್ನು ಮೊದಲು ಕಡಿಮೆ ಮಾಡಲಾಗಿತ್ತು. ಈಗ 3 ಔಷಧಗಳ ಮೇಲಿನ ಸುಂಕದಲ್ಲಿ ಪೂರ್ಣ ವಿನಾಯಿತಿ ಘೋಷಣೆ ಮಾಡಲಾಗಿದೆ.