ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಕಣ್ಣೀರ ಕದನ ಜೋರಾಗಿದೆ. ನೆನ್ನೆ ಎಲೆಕ್ಷನ್ ಕ್ಯಾಂಪೇನ್ ವೇಳೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ನಿಖಿಲ್ ಕಣ್ಣೀರಿನ ವಿಚಾರವನ್ನೇ ಕಾಂಗ್ರೆಸ್ ಅಸ್ತ್ರವನ್ನಾಗಿ ಮಾಡ್ಕೊಂಡಿದ್ದಾರೆ.
ಕುಮಾರಸ್ವಾಮಿ ಕುಟುಂಬದ ವಿರುದ್ಧ ಕೈ ನಾಯಕರು ಮಾತಿನ ಚಾಟಿ ಬೀಸಿದ್ದಾರೆ. ನಿಖಿಲ್ ಕಣ್ಣೀರಿಗೆ ಕುಟುಂಬದವರೇ ಹೊಣೆ, ಕುಮಾರಸ್ವಾಮಿ ಮಾಡಿದ ಅವ್ಯವಸ್ಥೆಗೆ ಜನ ಕಣ್ಣೀರು ಹಾಕ್ತಿದ್ದಾರೆ, ಜನರ ಕಣ್ಣೀರು ಒರೆಸೋರು ಯಾರು ಎಂದು ಯೋಗೇಶ್ವರ್ ಪ್ರಶ್ನೆ ಮಾಡಿದ್ದಾರೆ.
ನಿಖಿಲ್ ಕಣ್ಣೀರಿಗೆ ಅವರ ತಂದೆ-ತಾಯಿ ಕಾರಣ, ಮಂಡ್ಯದಲ್ಲಿ ನಿಖಿಲ್ ಸೋಲಿನ ಅನುಕಂಪದಿಂದ ಕುಮಾರಸ್ವಾಮಿ ಗೆದ್ದರು, ರಾಮನಗರದಲ್ಲಿ ಅನಿತಾ ಕೆಲಸ ಮಾಡಿಲ್ಲದ ಕಾರಣ ನಿಖಿಲ್ ಸೋತರು ಎಂದು ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನಿನ್ನೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡುವಾಗ ಕಣ್ಣಲ್ಲಿ ನೀರು ಹಾಕಿದ್ದನ್ನು ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಿದ್ದಂತೆಯೇ ಹೆಚ್ ಡಿ ಕುಮಾರಸ್ವಾಮಿ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾನು ಸಾರ್ವಜನಿಕವಾಗಿ ಹಲವಾರು ಬಾರಿ ಕಣ್ಣೀರು ಹಾಕಿದ್ದೇನೆ, ಜನರ ಸಮಸ್ಯೆಗಳನ್ನು ಕಂಡು ನೋವಿನಿಂದ ಕಣ್ಣಲ್ಲಿ ನೀರು ಬರುತ್ತದೆ ಎಂದು ಕೇಂದ್ರ ಸಚಿವ ಹೇಳಿದರು. ಚುನಾವಣಾ ಪ್ರಚಾರದಲ್ಲಿ ಮತ್ತು ಅನುಕಂಪ ಗಿಟ್ಟಿಸಲು ನಾನ್ಯಾವತ್ತೂ ಕಣ್ಣೀರು ಹಾಕಿಲ್ಲ ಎಂದು ಹೇಳಿದ್ದಾರೆ.