ಮಾಜಿ ಪ್ರಧಾನಿ ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ಮಾತಿನಲ್ಲೇ ತಿವಿದಿದ್ದಾರೆ. ಗರ್ವಭಂಗ ಮಾಡ್ತೀನಿ ಎಂದಿದ್ದ ದೇವೇಗೌಡರ ಮಾತಿಗೆ ಚುನಾವಣೆಯನ್ನ ಗೆಲ್ಲುವ ಮೂಲಕ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ‘ಗರ್ವಭಂಗ’ ಪಾಲಿಟಿಕ್ಸ್ ಮರ್ಮಾಘಾತ ನೀಡಿದೆ. ಬೊಂಬೆನಾಡಲ್ಲಿ ಗುರುವಿನ ‘ಗರ್ವಭಂಗ’ದ ಮಾತಿಗೆ ಶಿಷ್ಯ ತಿರುಗೇಟು ನೀಡಿದ್ದಾರೆ. ಗುರು-ಶಿಷ್ಯರ ಮಹಾಕಾಳಗದಲ್ಲಿ ಮತ್ತೆ ಶಿಷ್ಯ ಗೆದ್ದು ಬೀಗಿದ್ದಾರೆ. ಸಿದ್ದರಾಮಯ್ಯ ಗರ್ವಭಂಗ ಮಾಡ್ತೀನಿ ಎಂದಿದ್ದರು ಮಾಜಿ ಪ್ರಧಾನಿ ದೇವೇಗೌಡರು.
ಸಿದ್ದರಾಮಯ್ಯ ಸರ್ಕಾರವನ್ನ ಕಿತ್ತೆಸೆಯುತ್ತೇನೆ ಎಂದಿದ್ದ ದೇವೇಗೌಡರ ಮಾತಿಗೆ ಅಂದೇ ಕೌಂಟರ್ ಕೊಟ್ಟಿದ್ದರು ಸಿಎಂ ಸಿದ್ದರಾಮಯ್ಯ. ಇದು ದೇವೇಗೌಡರ ಪಾಳೇಗಾರಿಕೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ನನ್ನ ಹತ್ತಿರ ಈ ಪಾಳೇಗಾರಿಕೆ ನಡೆಯಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಒಟ್ಟಾರೆ ಒಕ್ಕಲಿಗರ ಭದ್ರಕೋಟೆಯಲ್ಲೇ ಜೆಡಿಎಸ್ ಗರ್ವಭಂಗವಾಗಿದೆ.