ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯನ್ನು ಶತಾಯಗತಾಯ ಗೆದ್ದು ತೀರಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಪಣ ತೊಟ್ಟಿದ್ದಾರೆ. ದಿನದಿಂದ ದಿನಕ್ಕೆ ಚನ್ನಪಟ್ಟಣದಲ್ಲಿ ಬೀಡು ಬಿಟ್ಟು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದರಲ್ಲೂ ಡಿಕೆಶಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ನಾಯಕರ ಆಪರೇಷನ್ ಗೆ ಮುಂದಾಗಿದ್ದು, ಜೆಡಿಎಸ್, ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ.
ಡಿಕೆಶಿ ಶಿವಕುಮಾರ್ ನೇತೃತ್ವದಲ್ಲಿ ಬೈರಾಪಟ್ಟಣದಲ್ಲಿ ಇಂದು ಜೆಡಿಎಸ್ ಮುಖಂಡ ರವಿಕುಮಾರ್, ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮೂಲಕ ಚುನಾವಣೆ ಎದುರಿಸುತ್ತಿದ್ದು, ಡಿಕೆಶಿ ಸ್ಥಳೀಯ ನಾಯಕರನ್ನು ಕೈ ನತ್ತ ಸೆಳೆದು, ಗೆಲುವಿನ ತಂತ್ರ ರೂಪಸಿದ್ದಾರೆ. ಇನ್ನೂ ಈ ವೇಳೆ ಎಂಎಲ್ಸಿ ಪುಟ್ಟಣ್ಣ, ಎಸ್ ರವಿ, ಕಾಂಗ್ರೆಸ್ ಮುಖಂಡರಾದ, ಬೆಂಗಳೂರು-ಮೈಸೂರು ಇಂಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಘುನಂದನ್ ರಾಮಣ್ಣ, ಮಾಜಿ ಶಾಸಕರಾದ ಅಶ್ವಥ್, ರಾಜು ಮತ್ತಿತರರು ಉಪಸ್ಥಿತರಿದ್ದರು.